

ಉದಯವಾಹಿ,ಕೆಂಭಾವಿ : ಈ ಬಾರಿ ರಾಜ್ಯದಲ್ಲಿ ಮುಂಗಾರು ಹಂಗಾಮು ಕೈಕೊಟ್ಟಿದ್ದು ಹಲವು
ಜಿಲ್ಲೆಗಳಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರು ಕಂಗಾಲಾಗಿದ್ದರೆ. ಕೂಡಲೇ ಬರಗಾಲ ಜಿಲ್ಲೆ ಎಂದು ಘೋಷಷಿಸುವಂತೆ ಪಟ್ಟಣದ ಯುವ ಮುಖಂಡ ಮಲ್ಲು ಎಮ್ ಎನ್ ಕೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೇದ ಜೂನ ತಿಂಗಳಿನಿಂದ ಆರಂಭವಾಗಬೇಕಿದ್ದ ಮಳೆ ಜು. ತಿಂಗಳಾದರು ಬರುತಿಲ್ಲ ಬರಗಾಲದ ಛಾಯೆ ಆವರಿಸಿದ್ದು .ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವಂತಾಗಲಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
