ಉದಯವಾಹಿ,
ತುಮಕೂರು: ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸ್ವಾಂದೇನಹಳ್ಳಿ ಕ್ಷೇತ್ರದ ಸದಸ್ಯ ಶ್ರೀ ಮತಿ ಮಹಾಲಕ್ಷಿ÷್ಮ ಆರ್ ಸೋಮಶೇಖರಯ್ಯ ಆಯ್ಕೆಯಾದರೆ, ಉಪಾಧ್ಯಕ್ಷ ರಾಗಿ ಯಲ್ಲಾಪುರ ಕ್ಷೇತ್ರದ ೪ ನೇ ವಾರ್ಡಿನ ಸದಸ್ಯ ಲೋಕೇಶ್ ಅವರು ಅವಿರೋಧವಾಗಿ ಆಯ್ಕೆಯಾದರು
೨೧ ಸದಸ್ಯ ಬಲದ ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿತ್ತು. ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶ್ರೀ ಮತಿ ಮಹಾಲಕ್ಷಿ÷್ಮ ಸೋಮಶೇಖರಯ್ಯ ಮತ್ತು ಶ್ರೀ ಮತಿ ಪಾರ್ವತಮ್ಮ ನಾರಾಯಣಮೂರ್ತಿ ಸ್ಪರ್ಧಿಸಿದ್ದರು. ಶ್ರೀ ಮತಿ ಮಹಾಲಕ್ಷಿ÷್ಮ.ಆರ್. ೧೫ ಮತಗಳನ್ನು ಪಡೆದರೆ, ಶೀಮತಿ ಪಾರ್ವತಮ್ಮ ನಾರಾಯಣಮೂರ್ತಿ ಅವರು ೬ ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲಾಪುರ ಗ್ರಾಮದ ವಾರ್ಡು ನಂ ೪ ರ ಸದಸ್ಯ ಲೋಕೇಶ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೇಲೆಯಲ್ಲಿ ಉಪಾಧ್ಯಕ್ಷ ರಾಗಿ ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ೩೫ ಗ್ರಾಮಪಂಚಾಯಿತಿ ಗಳಲ್ಲಿ ಇದುವರೆಗೆ ೪ ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಮೂರರಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷ -ಉಪಾಧ್ಯಕ್ಷ ರು ಆಯ್ಕೆಯಾದಂತಾಗಿದೆ. ಸ್ವಾದೇನಹಳ್ಳಿ ಗ್ರಾ.ಪಂ.ನ ನೂತನ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಶಾಸಕ ಬಿ.ಸುರೇಶಗೌಡ ಅಭಿನಂದನೆ ಸಲ್ಲಿಸಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಉತ್ತಮ ಆಡಳಿತ ನೆಡಸಿ ಸರ್ವರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ಶುಭ ಹಾರೈಸಿದರು.
