ಉದಯವಾಹಿನಿ,ಬೆಂಗಳೂರು, : ಜೆಡಿಎಸ್‌ಗೆ ಸಿದ್ದಾಂತ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಸಿದ್ದಾರೆ.ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವ ಸಿದ್ದಾಂತವಿದೆ, ಪಕ್ಕದಲ್ಲೇ ಕೂರಿಸಿಕೊಂಡಿದ್ದರಲ್ಲ. ನಿತೀಶ್ ಕುಮಾರ್,ಅಬ್ದುಲ್ಲಾಗೆ ಯಾವ ಸಿದ್ದಾಂತವಿದೆ. ಯಾವಾಗ ಕಾಂಗ್ರೆಸ್ ಜೊತೆ ಇದ್ರು, ಬಿಜೆಪಿ ಜೊತೆಗೆ ಯಾವಾಗ ಸರ್ಕಾರ ಮಾಡಿದ್ರು ಎಲ್ಲವೂ ಉದಾಹರಣೆಗಳಿದೆ. ಎಷ್ಟು ಪ್ರಕರಣಗಳಿದೆ, ಜೆಡಿಎಸ್‌ಗೆ ಮಾತ್ರ ಸಿದ್ದಾಂತವಿಲ್ಲ ಇವರಿಗೆ ಮಾತ್ರ ಸಿದ್ದಾಂತವಿದ್ಯಾ!? ಎಂದು ಪ್ರಶ್ನಿಸಿದರು. 2008-2009 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿಗೆ ಹೋಗಿದ್ದು ಯಾರು..? ಮಲ್ಲಿಕಾರ್ಜುನ ಖರ್ಗೆ ವಿಪಕ್ಷನಾಯಕರಾಗಿದ್ದಾಗ ಮೈತ್ರಿಗೆ ಹೋಗಿರಲಿಲ್ವಾ? ಅವರನ್ನೆ ಕೇಳಿ, ಈ ಬೂಟಾಟಿಕೆಗಳು ಬೇಡ ಎಂದು ಕಾಂಗ್ರೆಸ್ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
