ಉದಯವಾಹಿನಿ,ಬೆಂಗಳೂರು: ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿ ರೈತರು ಬಿತ್ತಿದ ಬೀಜ ಮೊಳಕೆಯಿಡೆದಿಲ್ಲ. ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ ಒಂದು ಕೋಟಿ ರೂ.ಅನುದಾನ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದ್ದಾರೆ.ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇಲೆ ಪ್ರಾಸ್ತಾವಿಕ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಹಲವೆಡೆ ಮಳೆಯ ಅಭಾವ ಉಂಟಾಗಿದೆ ನಿಗದಿತ ಸಮಯಕ್ಕೂ ಮಳೆ ಬಂದಿಲ್ಲ. ಮಳೆ ಬಾರದ ಕಾರಣ ರೈತರು ಭಿತ್ತನೆ ಬೀಜಗಳನ್ನು ಹಾಕಿಲ್ಲ. ಜುಲೈ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿದೆ. ಆದರೆ, ಎಲ್ಲ ಕಡೆಯೂ ಮಳೆಯಾಗಿಲ್ಲ. ರೈತರು ಬರಗಾಲ ವಾತಾವರಣ ಎದುರಿಸಿದ್ದಾರೆ ಎಂದು ವಿವರಿಸಿದರು.
