ಉದಯವಾಹಿನಿ, ಲಕ್ನೋ: ಹಿಂದೂ ಧರ್ಮ ಶ್ರೇಷ್ಠವಾದದ್ದು. ಭಾರತ ನೆಲದಲ್ಲಿರುವ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು ಎಂದು ಹಿರಿಯ ಆರ್‌ಎಸ್‌ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.ಭಾರತದಲ್ಲಿ ಮುಸ್ಲಿಮರಿಗೆ ಏನೂ ತೊಂದರೆಯಾಗುವುದಿಲ್ಲ. ನಮ್ಮ ಮುಸ್ಲಿಂ ಸಹೋದರರು ಸಹ ಸೂರ್ಯ ನಮಸ್ಕಾರ ಮಾಡಿದರೆ, ಅವರಿಗೆ ಏನೂ ಆಗಲ್ಲ. ಹಾಗಂತ ಅವರು ಮಸೀದಿಗೆ ಹೋಗುವುದನ್ನು ಯಾರೂ ತಡೆಯುವುದಿಲ್ಲ. ನಮ್ಮ ಹಿಂದೂ ಧರ್ಮ ಸರ್ವೋಚ್ಛ. ಅದು ಎಲ್ಲರ ಪರವಾಗಿದೆ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ.
ಯೋಗಾಸನಗಳ ಅನುಕ್ರಮವಾದ ಸೂರ್ಯ ನಮಸ್ಕಾರವು ವೈಜ್ಞಾನಿಕ ಮತ್ತು ಆರೋಗ್ಯ ಆಧಾರಿತ ಅಭ್ಯಾಸ. ಇದರಿಂದ ಮುಸ್ಲಿಮರಿಗೆ ಏನು ಹಾನಿ? ಪ್ರಾರ್ಥನೆ ಮಾಡುವವರು ಪ್ರಾಣಾಯಾಮ ಮಾಡಿದರೆ ತಪ್ಪೇ? ಸೂರ್ಯ ನಮಸ್ಕಾರ ಮಾಡೋದಕ್ಕೆ ನಮಾಜ್ ಬಿಡಿ ಅಂತ ನಾವು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾನವ ಧರ್ಮಕ್ಕೆ ಆದ್ಯತೆ ನೀಡುವ ಮೂಲಕ ಯಾವುದೇ ನಂಬಿಕೆಯನ್ನು ಅನುಸರಿಸಲು ಜನರು ಸ್ವತಂತ್ರರು. ಹಿಂದೂ ತತ್ವಶಾಸ್ತ್ರವು ಎಲ್ಲಾ ಜೀವಿಗಳು ಮತ್ತು ಪ್ರಕೃತಿ ವಿಚಾರವಾಗಿ ಅಹಿಂಸೆಯನ್ನು ಬೋಧಿಸುತ್ತದೆ ಎಂದು ತಿಳಿಸಿದ್ದಾರೆ.
