ಉದಯವಾಹಿನಿ , ಮುಂಬೈ: ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಕೂಡ ಆಯ್ಕೆಯಾಗಿದೆ. ಮತ್ತೊಂದು ಕಡೆ ದೆಹಲಿ ತಂಡದ ಆರಂಭಿಕ ಎರಡು ಪಂದ್ಯಗಳಿಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 24 ರಂದು ಸಿಕ್ಕಿಂ ವಿರುದ್ಧ ಮತ್ತು ಡಿಸೆಂಬರ್ 26 ರಂದು ಉತ್ತರಾಖಂಡ್ ವಿರುದ್ಧ ನಡೆಯಲಿರುವ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ. ಬಿಸಿಸಿಐನ ಹೊಸ ನಿಯಮದ ಪ್ರಕಾರ, ಎಲ್ಲಾ ರಾಷ್ಟ್ರೀಯ ತಂಡದ ಆಟಗಾರರು ಗಾಯಗೊಂಡರೆ ಕನಿಷ್ಠ ಎರಡು ದೇಶಿ ಏಕದಿನ ಪಂದ್ಯಗಳಲ್ಲಿ ಆಡಬೇಕು ಎಂಬ ನಿಯಮವಿದೆ. ತಂಡದಲ್ಲಿ ರೋಹಿತ್ ಅವರ ಸೇರ್ಪಡೆ ಮುಂಬೈಗೆ ಪ್ರಮುಖ ಉತ್ತೇಜನ ನೀಡುವುದಲ್ಲದೆ, ದೇಶಿ ಕ್ರಿಕೆಟ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ಅನುಭವಿ ಆಲ್‌ರೌಂಡರ್ ಶಾರ್ದುಲ್ ಠಾಕೂರ್ ಅವರನ್ನು ಮುಬೈಗೆ ನಾಯಕನನ್ನಾಗಿ ನೇಮಿಸಲಾಗಿದೆ.

ತಂಡದ ಪ್ರಮುಖ ತಾರೆಗಳಾದ ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಈ ಬಾರಿ ಆರಂಭಿಕ ಪಂದ್ಯಗಳಲ್ಲಿಆಡುವುದಿಲ್ಲ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಮಯದಲ್ಲಿ ಹೊಟ್ಟೆ ನೋವಿನ ಕಾರಣ ಜೈಸ್ವಾಲ್ ಪ್ರಸ್ತುತ ಪುಣೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ತಂಡ, ಅವರನ್ನು ಬಿಡುಗಡೆ ಮಾಡಿದ ತಕ್ಷಣ ಯಶಸ್ವಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಸಂಜಯ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಅದೇ ಸಮಯದಲ್ಲಿ, ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಸ್ನಾಯು ಸೆಳೆತದ ಗಾಯದಿಂದಾಗಿ ಆರಂಭಿಕ ಪಂದ್ಯಗಳಿಂದ ವಿಶ್ರಾಂತಿ ಕೋರಿದ್ದಾರೆ ಮತ್ತು ಸ್ವಲ್ಪ ಸಮಯದ ನಂತರ ಅವರು ತಂಡವನ್ನು ಸೇರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!