ಉದಯವಾಹಿನಿ ,  ಐಕಾನಿಕ್ ಸ್ಪೋರ್ಟ್ಸ್ ಅಂಡ್ಇವೆಂಟ್ಸ್ ಆಯೋಜಿಸಿರುವ, ಟೈಟಲ್ ಪಾರ್ಟ್ನರ್ ಆಗಿ ಐಕಾನಿಕ್ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಹಾಗೂ ಪವರ್ಡ್ ಪಾರ್ಟ್ನರ್ ಆಗಿಸ್ಪೈಸ್‌ಜೆಟ್ ಹೊಂದಿರುವ ವರ್ಲ್ಡ್ ಟೆನಿಸ್ ಲೀಗ್ ಗೆ ದೊಡ್ಡ ಟೆನಿಸ್ ತಾರಬಳಗವೇ ಬಂದಿದೆ. ಮೂರನೇ ನಡೆದ ಪಂದ್ಯದಲ್ಲಿ ಸುಮಿತ್ ನಾಗಲ್, ಶ್ರೀವಲ್ಲಿ ಭಾಮಿಡಿಪತಿ ಹಾಗೂ ಮಾಯಾ ರಾಜೇಶ್ವರನ್ ರೇವತಿ ಅದ್ಬುತ ಪ್ರದರ್ಶನ ನೀಡಿದರು. ದಿನದ ಮೊದಲ ಪಂದ್ಯದಲ್ಲಿ AOS ಈಗಲ್ಸ್, VB ರಿಯಾಲ್ಟಿ ಹಾಕ್ಸ್ ತಂಡವನ್ನು 22-12 ಅಂಕಗಳ ಅಂತರದಲ್ಲಿ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದರು. ಮೂರು ಪಂದ್ಯಗಳಿಂದ ಒಟ್ಟು 65 ಅಂಕಗಳನ್ನು ಗಳಿಸಿರುವ ಈಗಲ್ಸ್ ತಂಡ ಶನಿವಾರ ನಡೆಯಲಿರುವ ಫೈನಲ್‌ಗೆ ಬಹುತೇಕ ಅರ್ಹತೆ ಪಡೆದುಕೊಂಡಿದೆ.

ಇಂದಿನ ಪಂದ್ಯದಲ್ಲಿ ಟೆನಿಸ್‌ನ ಪವರ್ ಕಪಲ್ ಗೇಲ್ ಮೊನ್ಫಿಲ್ಸ್ ಮತ್ತು ಎಲಿನಾ ಸ್ವಿಟೋಲಿನಾ ಡಬಲ್ಸ್‌ನಲ್ಲಿ ಇಬ್ಬರೂ ಎದುರಾಳಿ ತಂಡಗಳಲ್ಲಿ ಆಡಿದರು. ರೋಚಕ ಪಂದ್ಯದಲ್ಲಿ ಹಾಕ್ಸ್ ಪರ ಯುಕಿ ಭಾಂಬ್ರಿ-ಎಲಿನಾ ಸ್ವಿಟೋಲಿನಾ ಜೋಡಿ, ಈಗಲ್ಸ್‌ನ ಗೇಲ್ ಮೊನ್ಫಿಲ್ಸ್-ಶ್ರೀವಲ್ಲಿ ಭಾಮಿಡಿಪತಿ ಜೋಡಿಯನ್ನು 6-4ರಿಂದ ಮಣಿಸಿತು. 28 ವರ್ಷದ ನಾಗಲ್, ವಿಂಬಲ್ಡನ್ ಫೈನಲಿಸ್ಟ್ ಡೆನಿಸ್ ಶಪೋವಾಲೊವ್ ವಿರುದ್ಧ 6-1ರಿಂದ ಗೆದ್ದು ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು.

ಮಿಶ್ರ ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೀವಲ್ಲಿ ನಂತರ, ರಫೆಲ್ ನಡಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 16 ವರ್ಷದ ಪ್ರತಿಭಾವಂತ ಆಟಗಾರ್ತಿ ಮಾಯಾ ರಾಜೇಶ್ವರನ್ ರೇವತಿ ವಿರುದ್ಧ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದರು. ರೇವತಿ ವಿರುದ್ಧ ಶ್ರೀವಲ್ಲಿ 6-2ರಿಂದ ಗೆಲುವು ದಾಖಲಿಸಿದರು. ಶ್ರೀವಲ್ಲಿ, ಪೌಲಾ ಬಾಡೋಸಾ ಜೊತೆಗೂಡಿ ಎಲಿನಾ ಸ್ವಿಟೋಲಿನಾ-ಮಾಯಾ ಜೋಡಿಯನ್ನು 6-3ರಿಂದ ಸೋಲಿಸಿದರು. ಬಳಿಕ ಬಡೋಸಾ ಮಾತನಾಡಿ ತಮ್ಮ ಜೊತೆಯ ಆಟಗಾರ್ತಿಯನ್ನು ಮನಸಾರೆ ಹೊಗಳಿದರು. “ಭಾರತಕ್ಕೆ ಇಲ್ಲಿ ಭವಿಷ್ಯದ ಸ್ಟಾರ್ ಇದ್ದಾಳೆ ಎಂದರು.

Leave a Reply

Your email address will not be published. Required fields are marked *

error: Content is protected !!