ಉದಯವಾಹಿನಿ, ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಬೃಹತ್ ಕಂಟೈನರ್‌ವೊಂದು ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿಂದ 14 ಕಿಮೀ ತಪ್ಪಿಸಿಕೊಂಡು ಹೋಗಿದ್ದ ಲಾರಿ ಚಾಲಕನನ್ನ ಸಾರ್ವನಿಕರೇ ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಮೇಲ್ನೋಟಕ್ಕೆ ಚಾಲಕ ಮದ್ಯದ ಅಮಲಿನಲ್ಲಿದ್ದ ಅನ್ನೋದು ಗೊತ್ತಾಗಿದೆ. ಬೆಸ್ತಮಾನಹಳ್ಳಿಯಿಂದ ಚಂದಾಪುರದ ಕಡೆಗೆ ಹೊರಟಿದ್ದ ಚಾಲಕ ರಸ್ತೆ ಅಕ್ಕಪಕ್ಕ ಸಿಕ್ಕಸಿಕ್ಕ ವಾಹನಗಳನ್ನೆಲ್ಲ ಗುದ್ದಿಕೊಂಡು ಹೋಗಿದ್ದಾನೆ. ಪೊಲೀಸರು 14 ಕಿಮೀ ಚೇಸ್ ಮಾಡಿದ್ರೂ ವಾಹನ ನಿಲ್ಲಿಸಿದೇ ಹೋಗಿದ್ದಾನೆ. ಕೊನೆಗೆ ಹೊಸೂರು ಹೆದ್ದಾರಿಯ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಿ ಲಾರಿ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸುತ್ತಿದ್ದಂತೆ ಚಾಲಕನನ್ನ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ.
