ಉದಯವಾಹಿನಿ, ಮುಂಬೈ: ನಟಿ ಮತ್ತು ಡ್ಯಾನ್ಸರ್ ನೋರಾ ಫತೇಹಿ ಅವರು ಇಂದು ಡೇವಿಡ್ ಗುಟ್ಟಾ ಅವರ ಸಂಗೀತ ಕಚೇರಿ ಸನ್‌ಬರ್ನ್ ಉತ್ಸವದಲ್ಲಿ ಭಾಗಿಯಾಗಲು ತೆರಳುತ್ತಿದ್ದಾಗ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಇಂದು ರಾತ್ರಿ 7 ಗಂಟೆ ಸುಮಾರು ಮದ್ಯದ ಅಮಲಿನಲ್ಲಿದ್ದ ಕಾರು ಚಾಲಕನೊಬ್ಬ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ನೋರಾ ಪ್ರಯಾಣಿಸುತ್ತಿದ್ದ ಕಾರಿನ ಡೋರ್ ಜಖಂಗೊಂಡಿದೆ.
ಅಪಘಾತವಾದ ಕೂಡಲೇ ನೋರಾ ಅವರ ತಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ಸಿಟಿ ಸ್ಕ್ಯಾನ್ ಮಾಡಲಾಯಿತು. ವೈದ್ಯರು ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ದೃಢಪಡಿಸಿದ ನಂತರ ನೋರಾ ಫತೇಹಿ ಸನ್‌ಬರ್ನ್ ಉತ್ಸವದಲ್ಲಿ ಭಾಗಿಯಾದರು.
ಡೇವಿಡ್ ಗುಟ್ಟಾ ಎಂಟು ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ. ಅವರು ಕೊನೆಯ ಬಾರಿಗೆ 2017 ರಲ್ಲಿ ಭೇಟಿ ನೀಡಿದ್ದರು.
