ಉದಯವಾಹಿನಿ, ಡೈರೆಕ್ಟರ್ ನಂದ ಕಿಶೋರ್ ನಿರ್ದೇಶನದ ವೃಷಭ ಚಿತ್ರ ರೆಡಿ ಆಗಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಕಿಚ್ಚ ಸುದೀಪ್ ಅಭಿನಯದ ಮಾರ್ಕ್, ಮಲ್ಟಿಸ್ಟಾರರ್ 45 ಚಿತ್ರ ರಿಲೀಸ್ ಆಗೋ ದಿನವೇ ಈ ಚಿತ್ರವೂ ರಿಲೀಸ್ ಆಗುತ್ತಿದೆ. ಆದರೆ, ಇದು ಮಲೆಯಾಳಂ ಭಾಷೆಯಲ್ಲಿ ರೆಡಿ ಆಗಿದೆ. ಪರ ಭಾಷೆಯಲ್ಲೂ ಡಬ್ ಆಗಿದೆ. ಹಾಗೆ ಈ ಚಿತ್ರದ ಕನ್ನಡದ ಹಾಡು ಇದೀಗ ರಿಲೀಸ್ ಆಗಿದೆ. ಅದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಲಿರಿಕ್ಸ್ ಕೂಡ ಚೆನ್ನಾಗಿದೆ. ಮ್ಯೂಸಿಕ್ ಸೆಳೆಯುತ್ತದೆ. ಅದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ಯುವ ನಟ ಸಮರ್ಜಿತ್ ಲಂಕೇಶ್ ಇದ್ದಾರೆ. ಇವರಿಗೆ ಇದು ಎರಡನೇ ಚಿತ್ರವೇ ಆಗಿದೆ. ಮೋಹನಲಾಲ್ ಮಗನ ರೋಲ್ ಮಾಡಿದ್ದಾರೆ. ಇವರ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ವೃಷ್ಣಭ ಚಿತ್ರದ ಚಿನ್ನ ಚಿನ್ನ ಹಾಡು ವೃಷಭ ಚಿತ್ರ ಬಹುಭಾಷೆಯಲ್ಲಿಯೇ ರಿಲೀಸ್ ಆಗುತ್ತದೆ. ಮಲೆಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಇದು ತಯಾರಾಗಿದೆ. ಆದರೆ, ಇದು ಕನ್ನಡ, ಹಿಂದಿ ಮತ್ತು ತಮಿಳು ಭಾಷೆಯಲ್ಲೂ ಡಬ್ ಆಗಿದೆ. ಹಾಗೆ ಈ ಚಿತ್ರದ ಕನ್ನಡ ಹಾಡು ಈಗ ರಿಲೀಸ್ ಆಗಿದೆ. 3 ನಿಮಿಷ 52 ಸೆಕೆಂಡ್‌ನ ಈ ಹಾಡು ಇಂಟ್ರಸ್ಟಿಂಗ್ ಆಗಿದೆ. ಚಿನ್ನ ಚಿನ್ನ ಅಂತಲೇ ಸಾಗೋ ಈ ಹಾಡನ್ನ ನಾಗಾರ್ಜುನ್ ಶರ್ಮಾ ಬರೆದಿದ್ದಾರೆ. ಕಪಿಲ್ ಕಪಿಲನ್ ಹಾಡಿದ್ದಾರೆ. ಸ್ಯಾಮ್ ಸಿ.ಎಸ್.ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸಮರ್ಜಿತ್ ಲಂಕೇಶ್ ತುಂಬಾನೆ ಚೆನ್ನಾಗಿ ಕಾಣಿಸುತ್ತಾರೆ. ಅದೇ ರೀತಿನೇ ಡ್ಯಾನ್ಸ್ ಕೂಡ ಮಾಡುತ್ತಾರೆ. ಇವರ ನಟನಾ ಪ್ರತಿಭೆ ಏನು ಅನ್ನೋದು ಮೊದಲ ಚಿತ್ರ “ಗೌರಿ”ಯಲ್ಲಿಯೇ ಗೊತ್ತಾಗಿದೆ.
