ಉದಯವಾಹಿನಿ , ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಭಾರತದ ಮಾರುಕಟ್ಟೆಗೆ ಬರುತ್ತಿರುವ ಕಾರಣ ಭಾರತದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಮತ್ತೆ ಏರಿಕೆ ಕಾಣಲು ಆರಂಭಿಸಿದೆ. ಸೆನ್ಸೆಕ್ಸ್ ಇಂದು 638.12 ಅಂಕ ಏರಿಕೆಯಾಗಿ 85,567.48 ರಲ್ಲಿ ಮುಕ್ತಾಯವಾದರೆ ನಿಫ್ಟಿ195.20 ಅಂಕ ಏರಿಕೆಯಾಗಿ 26,161 ರಲ್ಲಿ ಮುಕ್ತಾಯವಾಯಿತು.
ಡಾಲರ್ ಮುಂದೆ ರೂಪಾಯಿ ಮೌಲ್ಯ ಪತನವಾಗುತ್ತಲೇ ಇತ್ತು. ಆದರೆ ಆರ್‌ಬಿಐ (RBI) ಮಧ್ಯಪ್ರವೇಶದಿಂದ ರೂಪಾಯಿ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಇಂದು ಒಂದೇ ದಿನ 22 ಪೈಸೆ ಏರಿಕೆ ಕಂಡಿದೆ. ಪರಿಣಾಮ ಒಂದು ಡಾಲರ್ ಮೌಲ್ಯ 89.45 ರೂ. ತಗ್ಗಿದ್ದು ಹೂಡಿಕೆದಾರರಿಗೆ ವಿಶ್ವಾಸ ಹೆಚ್ಚಾಗಿದೆ.
ವಿದೇಶಿ ಹೂಡಿಕೆದಾರರು ಭಾರತ ಮಾರುಕಟ್ಟೆಯಿಂದ ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದರು. ಆದರೆ ಡಿ.17 ರಿಂದ ನಿರಂತರವಾಗಿ ಹಣವನ್ನು ಹೂಡುತ್ತಿದ್ದಾರೆ. ಡಿ.17 ರಂದು 1,171 ಕೋಟಿ ರೂ., ಡಿ.18 ರಂದು 595 ಕೋಟಿ ರೂ., ಡಿ.19 ರಂದು 1,830 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಇಂದು ಸಹ ಭಾರೀ ಪ್ರಮಾಣದಲ್ಲ ಹೂಡಿಕೆ ಮಾಡಿದ್ದರಿಂದ ಏರಿಕೆ ಕಂಡಿದೆ.
ಮೂರನೇಯದ್ದು ಮುಖ್ಯ ಕಾರಣ ರಷ್ಯಾ ಮತ್ತು ಉಕ್ರೇನ್ ಯುದ್ಧ ಕೊನೆಗೊಳಿಸಲು ಅಮೆರಿಕ ಮಾತುಕತೆ ನಡೆಯುತ್ತಿದೆ. ಈ ಕಾರಣಕ್ಕೆ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಾಗಿದ್ದು ಭಾರತದ ಮಾರುಕಟ್ಟೆಯಲ್ಲಿ ಹಣ ಹೂಡುತ್ತಿದ್ದಾರೆ.
