ಉದಯವಾಹಿನಿ , ಸಂಭಾಲ್, ಉತ್ತರಪ್ರದೇಶ: ಇಲ್ಲಿನ ಚಂದೌಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏಳು ದಿನಗಳ ಹಿಂದೆ ಮಾನವ ಅಂಗಾಗಳಿರುವ ಪಾಲಿಥಿನ್ ಚೀಲ ಪತ್ತೆಯಾಗಿತ್ತು. ಆ ಚೀಲದ ನಿಗೂಢತೆಯನ್ನು ಈಗ ಪೊಲೀಸರು ಭೇದಿಸಿದ್ದಾರೆ. ಪತ್ನಿ ಮತ್ತು ಆಕೆಯ ಪ್ರೇಮಿಯೇ ಈ ಕೊಲೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಮೃತನ ಮಗಳು ತನ್ನ ತಾಯಿಯ ದುಷ್ಕೃತ್ಯಗಳನ್ನು ಬಹಿರಂಗಪಡಿಸಿದ್ದಾಳೆ. ಪ್ರಸ್ತುತ ಪೊಲೀಸರು ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಇತರ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಹೀಗಿದೆ: ಚಂದೌಸಿ ಪೊಲೀಸ್ ಠಾಣಾ ಉಸ್ತುವಾರಿ ಅನುಜ್ ಕುಮಾರ್ ತೋಮರ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ 15 ರಂದು ಪತ್ರೋವಾ ರಸ್ತೆಯ ಈದ್ಗಾದ ಹೊರಗೆ ಪಾಲಿಥಿನ್ ಚೀಲದಲ್ಲಿ ಮಾನವ ಅಂಗಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಾಲಿಥಿನ್ ಚೀಲದಲ್ಲಿ ಕತ್ತರಿಸಿದ ಕೈಕಾಲುಗಳು ಮತ್ತು ಮಾಂಸದ ತುಂಡುಗಳು ಕಂಡುಬಂದಿದ್ದವು. ರಾಹುಲ್​ ಎಂಬ ವ್ಯಕ್ತಿಯ ಒಂದು ಕೈಯಲ್ಲಿ ಹಚ್ಚೆ ಹಾಕಲಾಗಿತ್ತು. ಇದರ ಆಧಾರದ ಮೇಲೆ, ದೇಹವನ್ನು ಗುರುತಿಸಲು ಪ್ರಯತ್ನಗಳು ನಡೆದಿದ್ದವು. ಆದರೆ, ಈ ಬಗ್ಗೆ ನಡೆದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು.

ಏತನ್ಮಧ್ಯೆ, ಚುನ್ನಿ ನಿವಾಸಿ ರಾಹುಲ್ ನಾಪತ್ತೆ ಬೆಳಕಿಗೆ ಬಂದಿತ್ತು. ಇದರ ಆಧಾರದ ಮೇಲೆ ನಡೆಸಲಾದ ತನಿಖೆಯಲ್ಲಿ ಕೊಲೆಯ ಸಾಧ್ಯತೆಗಳು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ರಾಹುಲ್ ಅವರ ಪತ್ನಿ ರೂಬಿ ಅವರ ಮೇಲೆ ಅನುಮಾನಾಸ್ಪದ ಪಾತ್ರವಿರುವುದು ಗೊತ್ತಾಯಿತು. ಇದರ ಆಧಾರದ ಮೇಲೆ, ಹಲವಾರು ಸುತ್ತಿನ ವಿಚಾರಣೆಗಳನ್ನು ನಡೆಸಲಾಯಿತು. ಈ ವೇಳೆ ಅವರು ನೀಡಿದ ಹೇಳಿಕೆಗಳು ಭಯಾನಕ ಕಥೆಯನ್ನು ಬಹಿರಂಗಪಡಿಸಿದವು. ಇವರ ಹೇಳಿಕೆ ಆಧರಿಸಿ ಇತರ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಯಿತು. ಘಟನೆಯ ರಾತ್ರಿ ರಾಹುಲ್ ತನ್ನ ಪತ್ನಿ ರೂಬಿಯನ್ನು ಆಕೆಯ ಪ್ರಿಯಕರ ಗೌರವ್ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ಎಂಬ ವಿಚಾರ ವಿಚಾರಣೆ ವೇಳೆ ಪೊಲೀಸರಿಗೆ ಗೊತ್ತಾಗಿತ್ತು. ಇಬ್ಬರೂ ರೆಡ್​ ಹ್ಯಾಂಡ್ ಆಗಿ ಸಿಕ್ಕ ಬಳಿಕ ಮನೆಯಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಬೆಳಗ್ಗೆ ತನ್ನ ಕುಟುಂಬಕ್ಕೆ ಈ ವಿಷಯವನ್ನು ಬಹಿರಂಗಪಡಿಸುವುದಾಗಿ ರಾಹುಲ್ ಬೆದರಿಕೆ ಹಾಕಿದ್ದ. ಇದಾದ ಬಳಿಕ ಹೆಂಡತಿ ತನ್ನ ಪ್ರಿಯಕರನ ಜತೆ ಸೇರಿ ರಾಹುಲ್ ಕೊಲೆಗೆ ಸಂಚು ರೂಪಿಸಿದ್ದ ಎಂದು ಅನುಜ್ ಕುಮಾರ್ ತೋಮರ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!