ಉದಯವಾಹಿನಿ, ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಗ್ಗೆ ಕೆಟ್ಟ ಕಾಮೆಂಟ್ಸ್ ಮಾಡಿದವರ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮರ ಸಾರಿದ್ದಾರೆ. ಕೆಟ್ಟ ಕಾಮೆಂಟ್ಸ್ ಮಾಡಿದ ಖಾತೆಗಳ ವಿರುದ್ಧ ವಿಜಯಲಕ್ಷ್ಮಿ ಸೈಬರ್ ಕ್ರೈಂಗೆ ದೂರು ನೀಡಿದ ಬಳಿಕ ಅಭಿಮಾನದ ಹೆಸರಲ್ಲಿ ಕಿರುಕುಳ ನೀಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಾರೆ ವಿಜಯಲಕ್ಷ್ಮಿ. ಅಲ್ಲದೇ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ವಿಜಯಲಕ್ಷ್ಮಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಕ್ಲಾಸ್ ಫ್ಯಾನ್ಸ್ ಎಂದು ಕರೆಯಲ್ಪಡುವ ಎಲ್ಲರಿಗೂ ನಿಮ್ಮ ಮಟ್ಟವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಧನ್ಯವಾದಗಳು. ಈ ಖಾತೆಗಳ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಲಾಗಿದೆ. ಅಭಿಮಾನದ ಹೆಸರಲ್ಲಿ ಇನ್ನುಮುಂದೆ ಕಿರುಕುಳ ನಡೆಯುವುದಿಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೀಳು ಭಾಷೆ ಬಳಸುವ ಕ್ಲಾಸಿ ಹುಡುಗಿಯರಿಗೆ ಮತ್ತು ತಾಯಂದಿರು, ಸಭ್ಯತೆ ಮತ್ತು ಮೂಲಭೂತ ಶಿಷ್ಟಾಚಾರಗಳನ್ನು ಬೈಪಾಸ್ ಮಾಡಿ ನೇರವಾಗಿ ಆಕಾಶದಿಂದ ಬಿದ್ದಂತೆ ಕಾಣುವ ಕ್ಲಾಸಿ ಪುರುಷರಿಗೆ ವಿಶೇಷ ಅಭಿನಂದನೆಗಳು. ಇದರ ಬಗ್ಗೆ ಯಾವುದೇ ವಿವರಣೆ ಅಗತ್ಯವಿಲ್ಲ ಎಂದಿದ್ದಾರೆ. ನಾನು ಮೌನವಾಗಿದ್ದುಕೊಂಡು ಇದನ್ನು ಅನುಮತಿಸುವುದಿಲ್ಲ. ಇದು ನಿಮ್ಮ ನಿತ್ಯದ ಕಾಯಕ ಆಗಿರಬಹುದು, ಇಂದು ಮತ್ತು ಮುಂದಿನ ದಿನಗಳಲ್ಲಿ ದೇವರು ನಿಮ್ಮನ್ನು ಆಶೀರ್ವದಿಸಲಿ. ಇದು ಕೇವಲ ನನ್ನ ಬಗ್ಗೆ ಅಲ್ಲ. ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು ಎಂದು ಇದು ನಿಮಗೆ ನೆನಪಿಸುತ್ತದೆ ಎಂದು ಸ್ಟೋರಿಯಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!