ಉದಯವಾಹಿನಿ, ಚಂದನವನದ ಪವರ್ ಸ್ಟಾರ್ ಆಗಿ ಅಭಿಮಾನಿಗಳ ಹೃದಯ ಗೆದ್ದ ಪುನೀತ್ ರಾಜಕುಮಾರ್ (ಅಪ್ಪು) ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳಿಗಾಗಿ 21 ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಆಕಾಶ್ ಸಿನಿಮಾವನ್ನು ನಾಳೆ (ಮಾರ್ಚ್ 13) ಮರು ಬಿಡುಗಡೆ ಮಾಡಲಾಗುತ್ತಿದೆ.
ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವು ಇದೇ ಮಾರ್ಚ್ 17ರಂದು ಇದ್ದು, ಈ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಪಿಆರ್‌ಕೆ ಪ್ರೊಡಕ್ಷನ್ ನಿರ್ಧರಿಸಿದೆ. ಹೀಗಾಗಿ ಅಪ್ಪು ನಟನೆಯ ಆಕಾಶ್ ಸಿನಿಮಾವನ್ನು ರಾಜ್ಯದ 80 ರಿಂದ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಆಕಾಶ್ ಸಿನಿಮಾವು 21 ವರ್ಷಗಳ ಹಿಂದೆ ಅಂದರೆ 2005ರಲ್ಲಿ ಬಿಡುಗಡೆಯಾಗಿ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಂಡಿತ್ತು.
ಸದ್ಯ, ಪಿಆರ್‌ಕೆ ಪ್ರೊಡಕ್ಷನ್ಸ್ ಅವರು ಈ ಯಶಸ್ಸಿನ ಸಂಭ್ರಮಾಚರಣೆಯ ಫೋಟೊಗಳನ್ನು, ಸಿನಿಮಾ ದಿಗ್ಗಜರ ಸಮಾಗಮದ ಫೊಟೊಗಳನ್ನು ಸೇರಿಸಿ ಅದಕ್ಕೆ ಆಕಾಶ್ ಸಿನಿಮಾದ ‘ನೀನೇ ನೀನೆ’ ಹಾಡನ್ನು ಜೋಡಿಸಿ ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!