ಉದಯವಾಹಿನಿ, ನಮ್ಮ ದೇಶದಲ್ಲಿ ಹಲವಾರು ದೇವಾಲಯಗಳಿವೆ ಅವುಗಳಿಗೆ ಅದರದೇ ಆದ ಇತಿಹಾಸವಿದೆ..ಪ್ರತಿಯೊಂದು ದೇವಾಲಯವೂ ತನ್ನದೇ ಆದ ಕಾರ್ಣಿಕವನ್ನ ಹೊಂದಿದೆ..ನಮ್ಮ ದೇಶದ ದೇವಾಲಯಗಳಿಂದಲೇ ಪ್ರವಾಸಿಗರನ್ನ ಸೆಳೆಯುತ್ತದೆ ಅಂತಾ ಹೇಳಿದ್ರೆ ತಪ್ಪೆನಿಲ್ಲಾ.. ಪ್ರತಿಯೊಂದು ದೇವಾಲಯದ ಅದರದ್ದೇ ಆದ ಇತಿಹಾಸ ಮಹತ್ವ ಹಾಗೂ ಶಕ್ತಿಯನ್ನ ಹೊಂದಿರುತ್ತದೆ..ಇಂತಹ ಸುಮಾರು ಕಾರ್ಣಿಕವುಳ್ಳ ದೇವಾಲಯಗಳು ನಮ್ಮ ಭಾರತದಲ್ಲಿವೆ..ಇಂಥದ್ದೇ ಒಂದು‌ ಕೃಷ್ಣನ ದೇವಾಲಯ ಹಿಮಾಚಲ ಪ್ರದೇಶದಲ್ಲಿದೆ. ಇದು ವಿಶ್ವದ ಅತ್ಯಂತ ಎತ್ತರದ ಶ್ರೀಕೃಷ್ಣನ ದೇವಾಲಯ ಎಂಬ ಖ್ಯಾತಿಯನ್ನು ಹೊಂದಿದೆ. ಹಾಗಿದ್ರೆ ಈ ದೇವಾಲಯದ ವಿಶೇಷತೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.. ಪ್ರತಿಯೊಂದು ದೇವಾಲಯದ ಅದರದ್ದೇ ಆದ ಇತಿಹಾಸ ಮಹತ್ವ ಹಾಗೂ ಶಕ್ತಿಯನ್ನ ಹೊಂದಿರುತ್ತದೆ..ಇಂತಹ ಸುಮಾರು ಕಾರ್ಣಿಕವುಳ್ಳ ದೇವಾಲಯಗಳು ನಮ್ಮ ಭಾರತದಲ್ಲಿವೆ..ಇಂಥದ್ದೇ ಒಂದು‌ ಕೃಷ್ಣನ ದೇವಾಲಯ ಹಿಮಾಚಲ ಪ್ರದೇಶದಲ್ಲಿದೆ. ಇದು ವಿಶ್ವದ ಅತ್ಯಂತ ಎತ್ತರದ ಶ್ರೀಕೃಷ್ಣನ ದೇವಾಲಯ ಎಂಬ ಖ್ಯಾತಿಯನ್ನು ಹೊಂದಿದೆ. ಹಾಗಿದ್ರೆ ಈ ದೇವಾಲಯದ ವಿಶೇಷತೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ದೇವರು ನಾಡು ಎಂದು ಪ್ರಸಿದ್ಧಿಯಾಗಿರುವ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಯುಲ್ಲಾ ಕಾಂಡದ ಸರೋವರದ ಮಧ್ಯದಲ್ಲಿ ಶ್ರೀಕೃಷ್ಣನ ಒಂದು ಸಣ್ಣ ದೇವಾಲಯವಿದೆ. ಇದನ್ನು ಯುಲ್ಲಾ ಕಾಂಡ್‌ ಶ್ರೀಕೃಷ್ಣ ದೇವಾಲಯ ಎಂದು ಸಹ ಕರೆಯುತ್ತಾರೆ..ಈ ದೇವಾಲಯದ ವಿಶೇಷ ಏನಾಪ್ಪ ಅಂದ್ರೆ ಸರೋವರಗಳ ನಡುವೆ ಇದೆ..ಯುಲ್ಲಾ ಕಾಂಡ್‌ ಶ್ರೀಕೃಷ್ಣ ದೇವಾಲಯ ಭಾರತದ ಹಾಗೂ ಅತಿ ಎತ್ತರದ ದೇವಾಲಯವೆಂದು ಗುರುತಿಸಲಾಗಿದೆ. ಅಂದ್ಹಾಗೆ , ಈ ದೇವಾಲಯ ಸಮುದ್ರ ಮಟ್ಟದಿಂದ ಸುಮಾರು 12,000 ಅಡಿ ಎತ್ತರದಲ್ಲಿದೆ. ಈ ದೇವಾಲಯದ ತಲುಪಲ್ಲು..14 ಕಿಲೋ ಮೀಟರ್‌ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ..ದೇಶ ವಿದೇಶಗಳಿಂದ ಭಕ್ತರು ಶ್ರೀ ಕೃಷ್ಣನ ದರ್ಶನ ಪಡೆಯಲು ಬರುತ್ತಾರೆ..ಎಷ್ಟೇ ಆಯಾಸವಾದಲೂ ಕಷ್ಟಪಟ್ಟು ಶ್ರೀ ಕೃಷ್ಣನಾ ದರ್ಶನ ಪಡೆಯುತ್ತಾರೆ..ನಾವು ನಡೆದು ಹೋಗುವ ದಾರಿ ಎಷ್ಟೇ ಕಷ್ಟದಾಗಿದ್ದರೂ ಕೂಡ ಪರಮಾತ್ಮ ಕೃಷ್ಣ ಮಾತ್ರ ತಮ್ಮ ದಾರಿಯನ್ನ ಸುಲಭವಾಗಿಸುತ್ತದೆ ಅನ್ನೋದು ಭಕ್ತರ ನಂಬಿಕೆಯಾಗಿದೆ.ಇನ್ನು ಕೃಷ್ಣ ಜನ್ಮಾಷ್ಟಮಿಯಂದು ನೂರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ..ಈ ಸಂದರ್ಭದಲ್ಲಿ ದೇವಾಲಯದ ಸಮಿತಿಯು ಭಕ್ತರಿಗಾಗಿ ಆಹಾರ, ವಾಸ್ತವ್ಯವನ್ನು ಕಲ್ಪಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!