ಉದಯವಾಹಿನಿ, ಉತ್ತರಪ್ರದೇಶ: ಹೆಂಡತಿ ಗೋಪ್ಯವಾಗಿ ಫೋನ್ ಬಳಸಿದಳು ಎನ್ನುವ ಕಾರಣಕ್ಕೆ ಆಕೆಯನ್ನು ಹೊಡೆದು ಕೊಂದೇ ಬಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದೃಶ್ಯಂ ಚಿತ್ರಕಥೆಯನ್ನು ಹೋಲುವ ಈ ಮರ್ಡರ್ ಸ್ಟೋರಿಯಲ್ಲಿ ಕೂಡ ಆರೋಪಿಯು ಪೊಲೀಸರ ದಾರಿ ತಪ್ಪಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ ಇದು ಸಿನಿಮಾ ಅಲ್ಲ ಜೀವನ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ಆತನ ಆಟಗಳು ಪೊಲೀಸರ ಮುಂದೆ ನಡೆಯಲಿಲ್ಲ. ತಾನು ಹೆಣೆದ ಜಾಲದಲ್ಲಿ ಸಿಕ್ಕಿ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಡಿಸೆಂಬರ್ 21ರಂದು ಈ ಘಟನೆ ನಡೆದಿದೆ. ಹೆಂಡತಿ ರಹಸ್ಯವಾಗಿ ಮೊಬೈಲ್ ಬಳಸಿದ್ದಾಳೆ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಹೆಂಡತಿಯನ್ನು ಕೊಂದು, ಬಳಿಕ ಆಕೆಯ ಶವವನ್ನು ಮನೆಯ ಹಿಂದಿನ ಗುಂಡಿಯಲ್ಲಿ ಹೂತುಹಾಕಿದ್ದಾನೆ. ಇದು ದೃಶ್ಯಂ ಚಿತ್ರ ಕಥೆಯನ್ನು ಹೋಲುವಂತೆ ಮಾಡಿದೆ.
ಘಟನೆಯ ಬಳಿಕ ವ್ಯಕ್ತಿಯು ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ತನಿಖೆಯ ದಾರಿ ತಪ್ಪಿಸಿದ್ದಾನೆ. ಸಾಕಷ್ಟು ಬಾರಿ ಪೊಲೀಸರನ್ನೇ ಮೂರ್ಖರನ್ನಾಗಿ ಮಾಡಿದ ಆರೋಪಿ ಕೊನೆಗೆ ತಾನೇ ಕೃತ್ಯ ಎಸಗಿರುವುದಾಗಿ ಹೇಳಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.ಲುಧಿಯಾನದಲ್ಲಿ ಕಾರ್ಮಿಕನಾಗಿದ್ದ ಅರ್ಜುನ್ ಡಿಸೆಂಬರ್ 21ರಂದು ಗೋರಖ್‌ಪುರದ ಮನೆಗೆ ಹಿಂದಿರುಗಿದ್ದಾನೆ. ಆತ ಮನೆಗೆ ಬಂದಾಗ ಹೆಂಡತಿ ಖುಷ್ಬೂ ರಹಸ್ಯವಾಗಿ ಮೊಬೈಲ್ ಬಳಸುತ್ತಿರುವುದನ್ನು ನೋಡಿದ್ದಾನೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಕೋಪದಲ್ಲಿ ಅರ್ಜುನ್ ತನ್ನ ಹೆಂಡತಿಯನ್ನು ಕೊಂದು ಹಾಕಿದ್ದಾನೆ. ಬಳಿಕ ಆತ ಹಾಸಿಗೆಯಲ್ಲಿ ಆಕೆಯ ಶವವನ್ನು ಇಟ್ಟು ಮಡಚಿ ಮನೆಯ ಹಿಂದಿನ ಗುಂಡಿಯಲ್ಲಿ ಹೂತುಹಾಕಿದ್ದಾನೆ.

Leave a Reply

Your email address will not be published. Required fields are marked *

error: Content is protected !!