ಉದಯವಾಹಿನಿ, ನವದೆಹಲಿ: ಉಪ್ಪಿನಕಾಯಿ, ಕರಿ, ದಾಲ್, ಅನ್ನ, ಚಪಾತಿ… ಇದು ಯಾವುದೇ ಮದುವೆ ಮನೆಯ ಊಟದ ಮೆನುವಲ್ಲ ದೆಹಲಿಯಲ್ಲಿ ಪ್ರಾರಂಭಿಸಲಾಗಿರುವ ಅಟಲ್ ಕ್ಯಾಂಟೀನ್‌ಗಳಲ್ಲಿ ಲಭ್ಯವಾಗುವ ಊಟದ ಮೆನು ಬಡವರು, ಕಾರ್ಮಿಕರು, ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಘನತೆಯಿಂದ ಆಹಾರ ಒದಗಿಸುವ ಉದ್ದೇಶದೊಂದಿಗೆ ದೆಹಲಿಯಲ್ಲಿ ಪ್ರಾರಂಬಿಸಲಾಗಿರುವ 100 ಅಟಲ್ ಕ್ಯಾಂಟೀನ್‌ಗಳಲ್ಲಿ ) ಕೇವಲ 5 ರೂ.ಗೆ ಸಿಗಲಿದೆ ಹೊಟ್ಟೆ ತುಂಬಾ ಊಟದ ಥಾಲಿ.ಅಟಲ್ ಕ್ಯಾಂಟೀನ್ ಗೆ ಚಾಲನೆ ನೀಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಾತನಾಡಿ, ಅಟಲ್ ಕ್ಯಾಂಟೀನ್ ಗೆ ಚಾಲನೆ ನೀಡಿ, ದೆಹಲಿಯ 100 ಅಟಲ್ ಕ್ಯಾಂಟೀನ್‌ಗಳಲ್ಲಿ ಶುಕ್ರವಾರದಿಂದ 5 ರೂ. ಥಾಲಿ ಲಭ್ಯವಾಗಲಿದೆ. ಇದು ಬಡವರು, ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಘನತೆಯಿಂದ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಅಟಲ್ ಕ್ಯಾಂಟೀನ್ ದೆಹಲಿಯ ಆತ್ಮವಾಗಲಿದೆ. ಯಾರೂ ಹಸಿವಿನಿಂದ ಮಲಗಬೇಕಾಗಿಲ್ಲದ ಸ್ಥಳವಾಗಿದೆ ಎಂದು ಅವರು ತಿಳಿಸಿದರು.ಅಟಲ್ ಕ್ಯಾಂಟೀನ್ ಮಾಹಿತಿ ಪ್ರಕಾರ ಪ್ರದೇಶವನ್ನು ಅವಲಂಬಿಸಿ, ಬೇಳೆ, ಅನ್ನ, ಚಪಾತಿ, ತರಕಾರಿ ಮತ್ತು ಉಪ್ಪಿನಕಾಯಿಯನ್ನು ಒಳಗೊಂಡಿರುವ ಊಟಕ್ಕೆ 500 ರಿಂದ 2,000 ರೂ. ಗಳ ವರೆಗೆ ಇರುತ್ತದೆ. ಪ್ರತಿದಿನ ಎರಡು ಹೊತ್ತಿನ ಊಟ ಸಿಗದ ಅದೆಷ್ಟೋ ಮಂದಿ ಇದ್ದಾರೆ. ಇವರಿಗಾಗಿ ಈ ತೃಪ್ತಿಕರ ಊಟ ಸಿಗಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ದೆಹಲಿ ಸರ್ಕಾರ ಪ್ರಾರಂಭಿಸಿರುವ ಈ ಯೋಜನೆ ಮೂಲಕ ನಗರದಾದ್ಯಂತ 100 ಸ್ಥಳಗಳಲ್ಲಿ ಕೇವಲ 5 ರೂ. ಗಳಿಗೆ ಪೌಷ್ಟಿಕ ಊಟವನ್ನು ವಿತರಿಸಲಾಗುತ್ತದೆ.
