ಉದಯವಾಹಿನಿ, ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲು ಪಬ್ ಅಂಡ್ ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್‌ಗೆ 30 ಮಾರ್ಗಸೂಚಿಗಳನ್ನು ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸೂಚನೆಗಳು ಏನು?
1. ರಾತ್ರಿ ಸರಿಯಾಗಿ 1 ಗಂಟೆಗೆ ಎಲ್ಲವೂ ಬಂದ್ ಆಗಬೇಕು.
2. ನಿಗದಿತ ಜಾಗಕ್ಕಿಂತ ಹೆಚ್ಚು ಜನರು ಪಬ್ & ಬಾರ್‌ನಲ್ಲಿ ಸೇರುವಂತಿಲ್ಲ.
3. ವಯಸ್ಸಿನ ಮಿತಿ ಕಡ್ಡಾಯವಾಗಿ ಪಾಲಿಸಲು ಸೂಚನೆ, ಅಪ್ರಾಪ್ತರಿಗೆ ನೋ ಎಂಟ್ರಿ, ಐಡಿ ಕಾರ್ಡ್ ಪರಿಶೀಲನೆ ಕಡ್ಡಾಯ.
4. ಡ್ರಿಕ್ ಅಂಡ್ ಡ್ರೈವ್ ಗೆ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ ಪಬ್ & ಬಾರ್ ಗಳಲ್ಲಿ ಡಿಸ್ಪ್ಲೇ ಮಾಡಬೇಕು.
5. ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ ಗಳಲ್ಲಿ ಸಿಸಿಟಿವಿ ಕಡ್ಡಾಯ.
6. ಮಹಿಳಾ ಸುರಕ್ಷತೆಗೆ ಹೆಚ್ಚು ಗಮನ ಕೊಡಬೇಕು. ಮಹಿಳಾ ಬೌನ್ಸರ್ ಗಳ ನೇಮಕ ಕಡ್ಡಾಯ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇರಬೇಕು. ಮಹಿಳೆಯರಿಗಾಗಿ ಸಹಾಯವಾಣಿ ಅಳವಡಿಕೆ ಕಡ್ಡಾಯ.
7.ಮ್ಯೂಸಿಕ್ ಹಾಕಿದರೂ ಅತಿ ಹೆಚ್ಚು ಸೌಂಡ್ ಇಡುವಂತಿಲ್ಲ. 50 DB ಮಿತಿಗಿಂತ ಹೆಚ್ಚಿನ ಶಬ್ಧಮಾಡುವಂತಿಲ್ಲ.
8. ಅನೈತಿಕ ಚಟುವಟಿಕೆಗಳು ನಡೆಸುವಂತಿಲ್ಲ. ಮಾದಕ ವಸ್ತು ಸಂಪೂರ್ಣ ನಿಷೇಧ. ಧೂಮಪಾನಕ್ಕಾಗಿ ಪ್ರತ್ಯೇಕ ಜಾಗ ಮೀಸಲಿರಬೇಕು.
9. ಪೊಲೀಸರಿಗೆ ಸಹಕಾರ ನೀಡಬೇಕು. ಪರಿಶೀಲನೆಗೆ ಬಂದಾಗ, ಸಿಸಿಟಿವಿ ಪರಿಶೀಲನೆ ಮಾಡುವಾಗ ಸಹಕರಿಸಬೇಕು.
