ಉದಯವಾಹಿನಿ, ನ್ಯೂಯಾರ್ಕ್ : ಕುಟುಂಬವೊಂದರ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿ, ಮನೆಯ ಸದಸ್ಯರಿಗೆ ಭಯೋತ್ಪಾದಕ ಬೆದರಿಕೆ ಹಾಕಿದ ಆರೋಪದ ಮೇಲೆ ಭಾರತೀಯ ಮೂಲದ 22 ವರ್ಷದ ವಿದ್ಯಾರ್ಥಿಯನ್ನು ಅಮೆರಿಕದ ಫ್ರಿಸ್ಕೊ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿರುವ ಮನೋಜ್ ಸಾಯಿ ಲೆಲ್ಲಾ ಬಂಧಿತ ಆರೋಪಿ. ಈ ವಾರದ ಆರಂಭದಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಮನೋಜ್ ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.ವಿದ್ಯಾರ್ಥಿಯ ಮಾನಸಿಕ ಆರೋಗ್ಯದ ಬಗ್ಗೆ ಕುಟುಂಬ ಸದಸ್ಯರು ದೂರು ನೀಡಿದ್ದು, ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ, ಪೊಲೀಸರು ಲೆಲ್ಲಾ ಮನೆಗೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ವಿದ್ಯಾರ್ಥಿ ಹಲವು ದಿನಗಳ ಹಿಂದೆ ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.ಲೆಲ್ಲಾ ಆವಾಸಸ್ಥಾನ ಅಥವಾ ಪೂಜಾ ಸ್ಥಳಕ್ಕೆ ಹಾನಿ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿರುವ ಆರೋಪ ಎದುರಿಸುತ್ತಿದ್ದಾರೆ. ಇದು ಮೊದಲ ಹಂತದ ಅಪರಾಧವಾಗಿದ್ದು, ಕುಟುಂಬ/ಮನೆಯ ಸದಸ್ಯರಿಗೆ ಭಯೋತ್ಪಾದಕ ಬೆದರಿಕೆವೊಡ್ಡಿರುವುದು ಪ್ರಮುಖ ಅಪರಾಧವಾಗಿದೆ. ಪೂಜಾ ಸ್ಥಳಕ್ಕೆ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಈ ಕೃತ್ಯಕ್ಕೆ ಬಾಂಡ್ ಪ್ರಕಾರ USD 100,000 ಮತ್ತು USD 3,500 ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವಾರ, ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಮತ್ತು ವಾಣಿಜ್ಯ ಚಾಲನಾ ಪರವಾನಗಿಗಳೊಂದಿಗೆ ಸೆಮಿಟ್ರಕ್‌ಗಳನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ 30 ಭಾರತೀಯ ಪ್ರಜೆಗಳನ್ನು ಅಮೆರಿಕದ ಗಡಿ ಗಸ್ತು ಏಜೆಂಟರು ಬಂಧಿಸಿದ್ದರು. ಕ್ಯಾಲಿಫೋರ್ನಿಯಾದ ಎಲ್ ಸೆಂಟ್ರೊ ಸೆಕ್ಟರ್‌ನಲ್ಲಿರುವ ಗಡಿ ಗಸ್ತು ಏಜೆಂಟರು ವಾಣಿಜ್ಯ ಚಾಲನಾ ಪರವಾನಗಿಗಳನ್ನು ಹೊಂದಿರುವ 49 ಅಕ್ರಮ ವಲಸಿಗರನ್ನು ವಲಸೆ ಚೆಕ್‌ಪೋಸ್ಟ್ ಹಾಗೂ ಅಂತರ-ಏಜೆನ್ಸಿ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (ಸಿಬಿಪಿ) ಹೇಳಿಕೆಯಲ್ಲಿ ತಿಳಿಸಿತ್ತು.
