ಉದಯವಾಹಿನಿ, ಬೆಳಗಾವಿ: ಅಭಿಮಾನಿಗಳು ಹೊಡೆದಾಡಿಕೊಳ್ಳುವ ಅವಶ್ಯಕತೆಯಿಲ್ಲ. ಎಲ್ಲದಕ್ಕಿಂತ ನಿಮ್ಮ ನಿಮ್ಮ ಬದುಕು ದೊಡ್ಡದು. ಬದುಕು ಗಟ್ಟಿಯಾಗಿ ಕಟ್ಟಿಕೊಂಡರೆ ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತಲೂ ಹೆಚ್ಚಿನ ಖುಷಿ ಮತ್ತೊಂದಿಲ್ಲ ಎಂದು ನಟ ಡಾಲಿ ಧನಂಜಯ್ ಕಿವಿಮಾತು ಹೇಳಿದ್ದಾರೆ.ಬೆಳಗಾವಿ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ನಟ ಡಾಲಿ ಹಾಗೂ ಕಾಂತಾರ ಬೆಡಗಿ ಸಪ್ತಮಿ ಗೌಡ ಫ್ಯಾನ್ಸ್ ವಾರ್ ಬಗ್ಗೆ ಮಾತನಾಡಿದ್ದಾರೆ.
ಅಭಿಮಾನಿಗಳು ಎಲ್ಲ ಕನ್ನಡ ಸಿನಿಮಾಗಳನ್ನ ನೋಡಿ. ಫ್ಯಾನ್ಸ್ ವಾರ್‌ಗಿಂತಲೂ ನಿಮ್ಮ ನಿಮ್ಮ ಬದುಕು ನಿಮಗೆ ದೊಡ್ಡದು, ಅದನ್ನ ಗಟ್ಟಿಯಾಗಿ ಕಟ್ಟಿಕೊಳ್ಳಿ. ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತ ಖುಷಿ ಮತ್ತೊಂದಿರಲ್ಲ. ಎಲ್ಲರಿಗೂ ಕುಟುಂಬ ಇರುತ್ತೆ, ಅಪ್ಪ-ಅಮ್ಮ ಇರ್ತಾರೆ, ಅದು ಎಲ್ಲದಕ್ಕಿಂತ ಮುಖ್ಯ. ಹೊಡೆದಾಟುವ ಅಗತ್ಯವಿಲ್ಲ. ಎಲ್ಲ ಕನ್ನಡ ಸಿನಿಮಾಗಳನ್ನ ನೋಡಿ ಸೆಲೆಬ್ರೇಟ್ ಮಾಡೋಣ. ಸಿನಿಮಾ ಇಷ್ಟ ಆಗಿಲ್ಲ ಅಂದ್ರೆ ಹೇಳಿ, ತಿದ್ದಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ.
