ಉದಯವಾಹಿನಿ, ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನದ ಕರಿಕಾಡ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರವು ಕನ್ನಡದಲ್ಲಿ ತಯಾರಾಗಿಯಾಗಿರುವ ಪಂಚಭಾಷೆ ಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಮ್ಯೂಸಿಕಲ್ ಜರ್ನಿ, ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಮೂರು ತಿಂಗಳ ಹಿಂದೆ ಟೈಟಲ್ ಟೀಸರ್ ರಿಲೀಸ್ ಮಾಡಿ ಸದ್ದು ಮಾಡಿದ್ದ ಕರಿಕಾಡ ಚಿತ್ರತಂಡ ಇದೀಗ ಅಧಿಕೃತ ಟೀಸರ್ ರಿಲೀಸ್ ಮಾಡಿ ಗಮನ ಸೆಳೆದಿದೆ. ಟೀಸರ್ ಭರವಸೆ ಹುಟ್ಟಿಸ್ತಿದೆ. ಸಾಹಸಮಯ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ, ನಮ್ಮ ಮಣ್ಣಿನ ಸೊಗಡನ್ನ ಸೂಸುವಂತಹ ಕಥಾಹಂದರ ಹೊಂದಿರುವಂತೆ ಕಾಣುತ್ತಿದೆ. ರಿವೇಂಜ್ ಸ್ಟೋರಿಯಂತೆ ಭಾಸವಾಗುತ್ತಿರುವ ಈ ಸಿನಿಮಾದ ತಾರಾಗಣ ಮತ್ತು ತಾಂತ್ರಿಕತೆ ಗಮನ ಸೆಳೆಯುತ್ತಿದೆ.

ಕಾಡನಟರಾಜ್ ನಾಯಕ ನಟನಾಗಿ ಅಭಿನಯಿಸಿರುವ ಈ ಸಿನಿಮಾದಲ್ಲಿ ಬಲರಾಜವಾಡಿ , ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಮಂಜು ಸ್ವಾಮಿ , ಗೋವಿಂದ ಗೌಡ , ದಿವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಮಾಸ್ಟರ್ ಆರ್ಯನ್ , ಬಾಲನಟಿ ರಿದ್ಧಿ , ಹಾಗೂ ಮುಂತಾದವರು. ಇನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ ಅಡಿ ಕಾಡ ನಟರಾಜ್ ಅವರ ಧರ್ಮಪತ್ನಿ ದೀಪ್ತಿ ದಾಮೋದರ್ ತನ್ನ ಪತಿಯ ಕನಸಿನ ಗುರಿಗೆ ದಾರಿ ತೋರಿಸಿದ್ದಾರೆ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!