ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಎಷ್ಟು ಪೂರಕವಾಗ ಅಷ್ಟೇ ಮಾರಕವಾಗಿ ಪರಿಣಮಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ಸೆಲೆಬ್ರಿಟಿಗಳು, ಅವರ ಕುಟುಂಬಸ್ಥರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ದುರುಳರು. ಅವರ ಬಗ್ಗೆ ಅಶ್ಲೀಲ ಮೆಸೇಜ್, ಕೊಳಕು ಭಾಷೆ ಬಳಸಿ ಸಂದೇಶ್ ಕಳುಹಿಸೋದು, ನೆಗೆಟಿವ್ ಟ್ರೋಲ್ ಮಾಡುವ ಖಯಾಲಿಗೆ ಬಿದ್ದಿದ್ದಾರೆ. ಇತ್ತೀಚಿಗೆ ಸುದೀಪ್ ಹಾಗೂ ಅವ್ರ ಮಗಳು ಸಾನ್ವಿ, ಪತ್ನಿಯ ಬಗ್ಗೆ ಸಾಕಷ್ಟು ಕೆಟ್ಟದಾಗಿ ಮೆಸೆಜ್ ಮಾಡಲಾಗಿತ್ತು ಈ ಬಗ್ಗೆಯೂ ಸುದೀಪ್ ಖಡಕ್ ಆಗಿ ಮಾತಾಡಿದ್ದಾರೆ.
ಕಿತ್ತೊಗಿರೊ ಕಾಮೆಂಟ್ಸ್ ಬಗ್ಗೆ ನಾನು ತಲೆ ಕೆಡಿಸ್ಕೊಳೋದಿಲ್ಲ. ಅದಕ್ಕೆ ಪ್ರತಿಕ್ರಿಯೆ ನೀಡಿದ್ರೆ, ನಾವು ಚೀಪ್ ಆಗ್ತೀವಿ. ಸೆಲೆಬ್ರೇಶನ್ ಬಗ್ಗೆ ಮಾತಾಡೋಣ, ಕರುನಾಡಿನಾದ್ಯಂತ ತಾಯಂದಿರು ಮೆಚ್ಚುಗೆ ಬಗ್ಗೆ ಮಾತಾಡೋಣ. ನೆಗೆಟಿವ್, ಕೆಟ್ಟದಾಗಿ ಟ್ರೋಲ್ ಮಾಡೋರ ಬಗ್ಗೆ ನಾನು ಮಾತಾಡಿ ನನ್ನ ಟೈಮ್ ಯಾಕೆ ವೇಸ್ಟ್ ಮಾಡ್ಲಿ ವೇಸ್ಟ್ ನನ್ ಮಕ್ಳು. ನನ್ನ ಮಗಳು ನಾನು ಫೇಸ್ ಮಾಡಿರೋದರ ಹತ್ತರಷ್ಟು ಫೇಸ್ ಮಾಡ್ತಾಳೆ, ನನಗಿಂತ ದೊಡ್ಡದಾಗಿ ಬೆಳಿತಾಳೆ ಅನ್ನೋ ಭರವಸೆ ನನಗಿದೆ. ಕನ್ನಡ ಇಂಡಸ್ಟ್ರಿಗೆ ಅವಳನ್ನ ಸ್ವಾಗತಿಸಿದ್ದಾರೆ. ಅವಳು ಹಾಡಿರುವ ಹಾಡು ಮೆಚ್ಚಿಕೊಂಡಿದ್ದಾರೆ ಅದಕ್ಕೆ ನಾನು ಎಲ್ಲರಿಗೂ ಧನ್ಯವಾದ ಹೇಳ್ತಿನಿ ಎಂದಿದ್ದಾರೆ ಕಿಚ್ಚ ಸುದೀಪ್.
