ಉದಯವಾಹಿನಿ, ಗೋಟ್ʼ ಸಿನಿಮಾ ಬಳಿಕ ರಾಜಕೀಯದಲ್ಲೇ ಸದ್ದು ಮಾಡ್ತಿದ್ದ ನಟ ದಳಪತಿ ವಿಜಯ್ ಈ ವಾರ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ವಿಶೇಷ ಅಂದ್ರೆ ವಿಜಯ್ ನಟನೆಯ ಕೊನೆಯ ಚಿತ್ರ ಎನ್ನಲಾಗುತ್ತಿರುವ `ಜನನಾಯಕನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಮಲೇಷಿಯಾದಲ್ಲಿ ಶನಿವಾರ ಜರುಗಲಿದೆ. ಆಡಿಯೋ ಲಾಂಚ್ ಹಿನ್ನೆಲೆ ಇಡೀ ಚಿತ್ರತಂಡ ಈಗಾಗಲೇ ಮಲೇಷಿಯಾ ತಲುಪಿದೆ. ವಿಜಯ್ ಕಡೆಯ ಸಿನಿಮಾ ಕಾರ್ಯಕ್ರಮ ಎಂಬ ಉದ್ದೇಶದಿಂದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುವ ಕಾರ್ಯಕ್ರಮ ಇದು. ಆದರೆ ಪತ್ನಿ ಸಂಗೀತಾ ಹಾಗೂ ಮಕ್ಕಳು ಉಪಸ್ಥಿತರಿರುವುದಿಲ್ಲ ಎಂಬ ಅಧಿಕೃತ ಸುದ್ದಿ ಕೇಳಿಬಂದಿದೆ.ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಲೇಷಿಯಾದಲ್ಲಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಫಸ್ಟ್ ಟೈಂ ಜರುಗುತ್ತಿದೆ.
ಟಿವಿಕೆ ಪಕ್ಷ ಸ್ಥಾಪಿಸಿರುವ ವಿಜಯ್ ಈ ಮೂಲಕ 2026ರ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಸ್ಪರ್ಧಿಸುವ ಉತ್ಸಾಹದಲ್ಲಿರುವ ವಿಜಯ್ ಸದ್ಯಕ್ಕೆ ಸಿನಿಮಾ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮ ವಿಜಯ್ ಪಾಲಿಗೆ ದೊಡ್ಡ ಕಾರ್ಯಕ್ರಮ. ಇದಕ್ಕೆ ವಿಜಯ್ ಕುಟುಂಬಸ್ಥರು ಭಾಗಿಯಾಗದೇ ಇರೋದು ಅಭಿಮಾನಿಗಳಿಗೆ ನಿರಾಸೆ ತರಿಸಿದೆ.
