ಉದಯವಾಹಿನಿ, ಫ್ಯಾಮಿಲಿ ವೀಕ್‌ನಲ್ಲಿ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆದು ಎಂಜಾಯ್ ಮಾಡಿದ್ದ ಸ್ಪರ್ಧಿಗಳಿಗೆ ಈಗ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ. ಖುಷಿಯಲ್ಲಿದ್ದ ಸ್ಪರ್ಧಿಗಳು ಬಿಗ್ ಬಾಸ್ ಹೇಳಿಕೆಯಿಂದ ಶಾಕ್ ಆಗಿದ್ದಾರೆ.
ಕಳೆದ ಎರಡು ವಾರ ಎಲಿಮಿನೇಷನ್ ಮಾಡದೇ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದರು. ಯಾವುದೇ ವೋಟಿಂಗ್ ಲೈನ್ ತೆಗೆದಿರಲಿಲ್ಲ. ಎಲಿಮಿನೇಷನ್ ಅಂತ ಹೇಳಿ ರಕ್ಷಿತಾ ಮತ್ತು ಧ್ರುವಂತ್ ಇಬ್ಬರನ್ನೂ ಒಂದು ವಾರ ಸೀಕ್ರೆಟ್ ರೂಮ್‌ಗೆ ಕಳಿಸಿದ್ದರು. ಎರಡನೇ ವಾರದಲ್ಲಿ ಚೈತ್ರಾ ಮತ್ತು ರಜತ್ ಎಲಿಮಿನೇಟ್ ಆದರು. ಆದರೆ, ಇವರು ಸ್ಪರ್ಧಿಗಳಲ್ಲ.. ಅತಿಥಿಗಳು ಅಂತ ಹೇಳಿ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸ್ಪೂರ್ತಿ ಬರಲಿ ಎಂಬ ಕಾರಣಕ್ಕೆ ಇಬ್ಬರನ್ನೂ ವೈಲ್ಡ್ ಕಾರ್ಡ್ ಮೂಲಕ ಕರೆತಂದಿದ್ದೆವೆಂದು ಸುದೀಪ್ ತಿಳಿಸಿದ್ದರು.
ಈ ವಾರ ಡಬಲ್ ಎಲಿಮಿನೇಷನ್ ಶಾಕ್ ಕೊಟ್ಟಿದ್ದಾರೆ. ಈ ಟೈಮಲ್ಲೇ ಬಿಗ್ ಬಾಸ್ ಮನೆಗೆ ಗೆಸ್ಟ್‌ಗಳು ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್ ಸಿನಿಮಾ ನಿರ್ದೇಶಕ ಪ್ರೇಮ್ ಮತ್ತು ರೀಷ್ಮಾ ನಾಣಯ್ಯ ಆಗಮಿಸಿದ್ದಾರೆ. ಅವರ ಜೊತೆ ಸ್ಪರ್ಧಿಗಳು ಎಂಜಾಯ್ ಮಾಡಿದ್ದಾರೆ. ಮನೆಯಲ್ಲಿ ಯಾರನ್ನ ಉಳಿಸಬೇಕು, ಯಾರನ್ನು ಹೊರಗೆ ಕರ್ಕೊಂಡು ಹೋಗ್ಬೇಕು ಅಂತೀರೋ ಅವರನ್ನು ಕರ್ಕೊಂಡು ಹೋಗ್ತೀವಿ ಬಿಗ್ ಬಾಸ್ ಅಂತ ಪ್ರೇಮ್ ಕೇಳ್ತಾರೆ. ಈ ವಾರ ಎಲಿಮಿನೇಟ್ ಆಗುವವರು ಮನೆಯವರ ಜೊತೆ ವಿದಾಯ ಹೇಳುವ ಅವಕಾಶವೂ ಇರುವುದಿಲ್ಲ ಅಂತ ಬಿಗ್ ಬಾಸ್ ತಿಳಿಸಿದ್ದಾರೆ. ಸ್ಪಂದನಾ, ಧ್ರುವಂತ್, ಸೂರಜ್, ರಾಷಿಕಾ ಎಲಿಮಿನೇಷನ್ ರೌಂಡ್‌ನಲ್ಲಿದ್ದು ಯಾರು ಮನೆಗೆ ಹೋಗ್ತಾರೆ ಎಂಬುದು ಕುತೂಹಲ ಮೂಡಿಸಿದೆ.
