ಉದಯವಾಹಿನಿ, ಮುಂಬೈ: ಮೊಮ್ಮಗನ ಕೊಲೆ ಆರೋಪದಲ್ಲಿ ಜೈಲಲ್ಲಿರುವ ಗ್ಯಾಂಗ್‌ಸ್ಟರ್ ಬಂಡು ಆಂಡೇಕರ್, ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾನೆ. ಕಪ್ಪು ಬಟ್ಟೆಯಿಂದ ಮುಖ ಮುಚ್ಚಿ, ಕೈಗಳನ್ನು ಕಟ್ಟಿ ಸರ್ಕಾರಿ ಕಚೇರಿಗೆ ಗ್ಯಾಂಗ್‌ಸ್ಟರ್‌ನನ್ನು ಕರೆದೊಯ್ಯಲಾಯಿತು. ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪೊಲೀಸ್ ಭದ್ರತೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾನೆ. ಮೊಮ್ಮಗ ಆಯುಷ್ ಕೊಮ್ಕರ್ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆಂಡೇಕರ್‌ಗೆ ಪುಣೆಯ ವಿಶೇಷ MCOCA ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿತ್ತು. ಅಪರಾಧಿಯು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾನೆ. ಅದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಂಡು ಅತ್ತಿಗೆ ಲಕ್ಷ್ಮಿ ಆಂಡೇಕರ್ ಮತ್ತು ಸೊಸೆ ಸೋನಾಲಿ ಆಂಡೇಕರ್ ಕೂಡ ನ್ಯಾಯಾಲಯದ ಅನುಮತಿಯಂತೆ ನಾಮಪತ್ರ ಸಲ್ಲಿಸಿದ್ದಾರೆ.
ಪುಣೆಯಲ್ಲಿ ಮಹಾನಗರ ಪಾಲಿಕೆಗಳು ಮತ್ತು ರಾಜ್ಯದ 28 ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಜನವರಿ 15 ರಂದು ನಡೆಯಲಿವೆ. ಕಪ್ಪು ಬಟ್ಟೆಯಿಂದ ಮುಖ ಮುಚ್ಚಿ, ಕೈಗಳನ್ನು ಹಗ್ಗದಿಂದ ಕಟ್ಟಿ, ಯೆರವಡಾ ಕೇಂದ್ರ ಕಾರಾಗೃಹದಿಂದ ಪೊಲೀಸ್ ವ್ಯಾನ್‌ನಲ್ಲಿ ನಗರದ ಭವಾನಿ ಪೇಟ್ ಪ್ರದೇಶದಲ್ಲಿರುವ ಗೊತ್ತುಪಡಿಸಿದ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಆಂಡೇಕರ್‌ನನ್ನು ಕರೆತರಲಾಯಿತು.
