ಉದಯವಾಹಿನಿ, ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಾಲ್ಕನೇ ಆಷಸ್ ಟೆಸ್ಟ್ ಪಂದ್ಯ ಆರಂಭವಾಗಿತ್ತು ಆದರೆ, ಡಿಸೆಂಬರ್ 27 ರಂದು ಪಂದ್ಯ ಅಚ್ಚರಿ ರೀತಿಯಲ್ಲಿ ಮುಕ್ತಾಯವಾಯಿತು. ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತು. 14 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ತಂಡಕ್ಕೆ ಇದು ಮೊದಲ ಟೆಸ್ಟ್ ಗೆಲುವಾಗಿದೆ. ಇದು ಇಂಗ್ಲೆಂಡ್‌ಗೆ ಐತಿಹಾಸಿಕ ಜಯ. ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್‌ನ ಮೊದಲ ಟೆಸ್ಟ್ ಗೆಲುವು ಕೂಡ ಇದಾಗಿದೆ. ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ (Joe Root) ಮಹತ್ವದ ದಾಖಲೆಯೊಂದನ್ನು ಬರೆದಿದ್ದಾರೆ.
ಮೆಲ್ಬೋರ್ನ್ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಜೋ ರೂಟ್ ಶೂನ್ಯಕ್ಕೆ ಔಟಾದರು, ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 15 ರನ್‌ಗಳನ್ನು ಗಳಿಸಿದರು. ಆದಾಗ್ಯೂ, ಕೇವಲ 15 ರನ್‌ಗಳನ್ನು ಗಳಿಸುವ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ಒಂಬತ್ತನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ, ಈ ಸಾಧನೆಯನ್ನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕುಮಾರ್ ಸಂಗಕ್ಕಾರ, ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಮಹೇಲಾ ಜಯವರ್ಧನೆ, ಜಾಕ್ ಕಾಲಿಸ್ ಮತ್ತು ಬ್ರಿಯಾನ್ ಲಾರಾ ಸಾಧಿಸಿದ್ದಾರೆ. ಇದೀಗ ಈ ಸಾಲಿಗೆ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಸೇರ್ಪಡೆಯಾಗಿದ್ದಾರೆ. ಜೋ ರೂಟ್ ಅವರು ಆಸ್ಟ್ರೇಲಿಯಾದಲ್ಲಿ ಎಂದಿಗೂ ಟೆಸ್ಟ್ ಶತಕ ಗಳಿಸಿರಲಿಲ್ಲ. ಇದು ಹೆಚ್ಚು ಚರ್ಚೆಯ ವಿಷಯವಾಗಿತ್ತು. ಆದರೆ, ಈ ಬಾರಿ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಅವರು ಅದನ್ನು ಬದಲಾಯಿಸಿದರು. ರೂಟ್ ಅಂತಿಮವಾಗಿ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಮೊದಲ ಶತಕವನ್ನು ದಾಖಲಿಸಿದ್ದಾರೆ.
