ಉದಯವಾಹಿನಿ, ಉತ್ತರಪ್ರದೇಶ: ಅಪ್ರಾಪ್ತ ವಯಸ್ಕರು ಶಾರ್ಟ್ಸ್ ಧರಿಸುವುದನ್ನು ಸ್ಮಾರ್ಟ್ ಫೋನ್ ಬಳಸುವುದನ್ನು ಉತ್ತರಪ್ರದೇಶದ ಗ್ರಾಮ ಪಂಚಾಯತ್ ವೊಂದರ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಇದು ಈಗ ದೇಶಾದ್ಯಂತ ಸುದ್ದಿ ಮಾಡಿದೆ ಮಾತ್ರವಲ್ಲ ಸಾಕಷ್ಟು ಮಂದಿಯಿಂದ ಈ ಕ್ರಮಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಖಾಪ್ ಪಂಚಾಯತ್ ಸಾಮಾಜಿಕ ಮೌಲ್ಯಗಳು ಮತ್ತು ಶಿಸ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟ್‌ಫೋನ್‌ ಬಳಸುವುದು, ಶಾರ್ಟ್ಸ್ ಗಳನ್ನೂ ಧರಿಸುವುದನ್ನು ನಿಷೇಧಿಸಿದೆ.ಥಂಬಾ ಪಟ್ಟಿ ಮೆಹರ್ ದೇಶ್‌ಖಾಪ್‌ನ ಸಭೆಯಲ್ಲಿ ಶನಿವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಖಾಪ್ ನಾಯಕರು, ಸಾರ್ವಜನಿಕ ಸ್ಥಳಗಳಲ್ಲಿ ಹುಡುಗರು ಕುರ್ತಾ, ಪೈಜಾಮಾ ಮತ್ತು ಹುಡುಗಿಯರು ಸಲ್ವಾರ್, ಕುರ್ತಾ ಧರಿಸಲು ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಅರ್ಧ ಪ್ಯಾಂಟ್ ಗಳನ್ನು ಧರಿಸುವಂತಿಲ್ಲ. ಇದು ಸಾಮಾಜಿಕ ರೂಢಿಗಳಿಗೆ ವಿರುದ್ಧವಾಗಿದ್ದು, ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಮನೆಯೊಳಗೆ ಯಾವ ರೀತಿಯ ಬಟ್ಟೆಗಳನ್ನು ಧರಿಸಲಿ. ಇದಕ್ಕೆ ನಮ್ಮ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಸಾಧಾರಣ ಮತ್ತು ಸರಳವಾದ ಬಟ್ಟೆಗಳನ್ನು ಧರಿಸುವುದು ಸಾಮಾಜಿಕವಾಗಿ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಶೈಕ್ಷಣಿಕ ಕಾರಣದಿಂದ ಕೆಲವೇ ಕೆಲವು ಮಕ್ಕಳು ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ. ಆದರೆ ಹೆಚ್ಚಿನ ಮಕ್ಕಳು ತಮ್ಮ ಫೋನ್‌ಗಳಲ್ಲಿ ಅನಗತ್ಯವಾಗಿ ಮುಳುಗಿರುತ್ತಾರೆ. ಇದು ಅವರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಿರಿಯರಿಗೆ ಅವಿಧೇಯರಾಗುವಂತೆ ಮಾಡುತ್ತದೆ. ಆದ್ದರಿಂದ 18 ವರ್ಷದೊಳಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದನ್ನು ಅನುಚಿತವೆಂದು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.ನೀಡಿದರು.

Leave a Reply

Your email address will not be published. Required fields are marked *

error: Content is protected !!