ಉದಯವಾಹಿನಿ, ಬಿಗ್‌ಬಾಸ್ ಕನ್ನಡ ಸೀಸನ್ 12ರ (BBK 12) ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿವೆ. ದಿನಗಳೆದಂತೆ ಮನೆಯಲ್ಲಿ ಮೋಜು, ಮಸ್ತಿ ಜೊತೆಜೊತೆಗೆ ಟೆನ್ಷನ್ ಕೂಡ ಜಾಸ್ತಿಯಾಗಿದೆ.ಕಳೆದು ಒಂದು ವಾರದಿಂದ ಮನೆಯಲ್ಲಿನ ಸದಸ್ಯರು ಕುಟುಂಬಸ್ಥರನ್ನು ಕಂಡು ಸಂಭ್ರಮ, ಸಡಗರದಲ್ಲಿದ್ದರು. ಅದಾದ ಬಳಿಕವೇ ಬಿಗ್‌ಬಾಸ್ ಕೂಡ ಈ ವಾರ ಡಬಲ್ ಎಲಿಮಿನೇಷನ್ ಇದೆ ಎಂದು ಶಾಕ್ ನೀಡಿದ್ದರು. ಅದರಂತೆ ಎಪಿಸೋಡ್‌ನಲ್ಲಿ ಸೂರಜ್ ಮನೆಯಿಂದ ಹೊರಹೋಗಿದ್ದಾರೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಷನ್ ಕಾವು ಜೋರಾಗಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗದಿದ್ದರೇ ಸಾಕು ಎನ್ನುತ್ತಿದ್ದಾರೆ.
ಹೌದು, ವಾಹಿನಿ ಇದೀಗ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಸ್ಪಂದನಾ ಹಾಗೂ ಮಾಳು ಇಬ್ಬರ ಪೈಕಿ ಒಬ್ಬರು ಈಗ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗುತ್ತಾರೆ ಎಂದು ಬಿಗ್‌ಬಾಸ್ ತಿಳಿಸುತ್ತಾರೆ. ಈ ವೇಳೆ ಕಾರಣಕೊಟ್ಟ ಗಿಲ್ಲಿ, ಸ್ಪಂದನಾ ಯಾರು? ಸ್ಪಂದನಾ ಅಂದ್ರೆ ಏನು? ಎನ್ನುವ ಕ್ಲ್ಯಾರಿಟಿ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ. ಧನುಷ್ ಮಾತನಾಡಿ, ಮಾಳು ತನಗಾಗಿಯೇ ಸ್ಟ್ಯಾಂಡ್ ತೆಗೆದುಕೊಂಡಿಲ್ಲ… ಸ್ಪಂದನಾ ಮೊದಲಿನಿಂದಲೂ ಒಂದೇ ರೀತಿಯಾಗಿದ್ದಾರೆ ಎಂದು ಮನೆಯವರೆಲ್ಲರೂ ಕಾರಣ ಕೊಡುತ್ತಾರೆ.
