ಉದಯವಾಹಿನಿ, ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿವೆ. ದಿನಗಳೆದಂತೆ ಮನೆಯಲ್ಲಿ ಮೋಜು, ಮಸ್ತಿ ಹೆಚ್ಚಾಗುತ್ತಿದೆ. ಇದೀಗ ಬಿಗ್‌ಬಾಸ್‌ಗೆ ಮನೆಗೆ ಮಾಜಿ ಸ್ಪರ್ಧಿ ಅನುಪಮಾ ಗೌಡ ಎಂಟ್ರಿಕೊಟ್ಟಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಇದೀಗ ಸೀಸನ್ 12ರ ಮನೆಗೆ ಆಗಮಿಸಿದ್ದಾರೆ. ಅನುಪಮಾ ಅವರನ್ನು ಕಂಡು ಸ್ಪರ್ಧಿಗಳು ಕೂಡ ಖುಷಿಯಾಗಿದ್ದಾರೆ. ಈ ವೇಳೆ ಅನುಪಮಾ ಗೌಡ ಮನೆಯವರಿಗೆ ತಮ್ಮ ಬಗ್ಗೆ ಪರಿಚಯ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಅಶ್ವಿನಿ ಗೌಡ ಮಾತನಾಡುತ್ತಾ ರಘು ಅವರನ್ನು ಹಾಡಿಹೊಗಳಿದ್ದಾರೆ.
ನಾವೆಲ್ಲ 14ನೇ ವಾರದಲ್ಲಿದ್ದೇವೆ. ಅವತ್ತು ರಘುವನ್ನು ಕಂಡೇ, ಆದರೆ ಇದೀಗ ಮಗುವನ್ನು ನೋಡುತ್ತಿದ್ದೇನೆ. ಮನೆಯವರೆಲ್ಲರೂ ಪ್ರೀತಿಯಿಂದ ರಘು ಅಣ್ಣ ಅಂತ ಕರೀತಾರೆ, ನನಗೂ ಅನಿಸುತ್ತೆ ಆದ್ರೆ….. ಎಂದು ನಾಚಿಕೊಂಡಿದ್ದಾರೆ. ಅವರು ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ, ನಾನು ಅವರನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಳಿಕ ರಘು ಮಾತನಾಡಿ, ಒಬ್ಬ ವ್ಯಕ್ತಿಯಾಗಿ ನನಗೆ ಅವರು ತುಂಬಾ ಇಷ್ಟ ಎಂದಿದ್ದಾರೆ. ಇದೆಲ್ಲ ನೋಡಿದ ಮನೆಯವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದೆಲ್ಲವನ್ನು ನೋಡೋಕೆ ಆಗುತ್ತಿಲ್ಲ ಎಂದಿದ್ದಾರೆ. ಇನ್ನೂ ಗಿಲ್ಲಿ ನನಗೆ ಇದನ್ನು ನೋಡಿದರೆ ಸ್ವಯಂವರ ತರ ಅನ್ನಿಸುತ್ತಿದೆ ಎಂದಿದ್ದಾರೆ.
