ಉದಯವಾಹಿನಿ, ಬಿಗ್ ಬಾಸ್ ಮನೆಯಿಂದ ಸೂರಜ್ ಹೊರನಡೆದಿದ್ದಾರೆ. ಬಿಗ್ ಬಾಸ್ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ಶಾಕ್ ಕೊಟ್ಟ ಬೆನ್ನಲ್ಲೇ ಸೂರಜ್ ಸಿಂಗ್ ಮನೆಯಿಂದ ಔಟ್ ಆದರು. ಈ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆದಿದೆ. ಧನುಷ್, ಧ್ರುವಂತ್, ಸೂರಜ್, ರಾಷಿಕಾ, ರಕ್ಷಿತಾ, ಮಾಳು, ಸ್ಪಂದನಾ ಎಲಿಮಿನೇಷನ್ ರೌಂಡ್‌ನಲ್ಲಿದ್ದರು. ಮೊದಲ ಸುತ್ತಿನಲ್ಲಿ ಧ್ರುವಂತ್, ಸೂರಜ್, ರಾಷಿಕಾ, ಸ್ಪಂದನಾರನ್ನು ಎಲಿಮಿನೇಷನ್ ಅಗ್ನಿಪರೀಕ್ಷೆಗೆ ಒಳಪಡಿಸಲಾಯಿತು. ಅಂತಿಮವಾಗಿ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ. ಅಚ್ಚರಿ ಎಂಬಂತೆ ಅವರನ್ನು ಹೊರ ಕಳುಹಿಸಲಾಗಿದೆ.
ಬಿಗ್ ಬಾಸ್ ಮನೆಗೆ ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ತಮ್ಮ ಅಟ್ರ್ಯಾಕ್ಟಿವ್ ಜಿಮ್ ಬಾಡಿ ಮೂಲಕ ಮನೆಯ ಸುಂದರಿಯರ ಮನಗೆದ್ದಿದ್ದರು. ಮನೆಯಲ್ಲಿ ರಾಷಿಕಾ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಹಲವು ಟಾಸ್ಕ್‌ಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ಅಡುಗೆ ಮನೆಯಲ್ಲಿ ರುಚಿಕರ ಅಡುಗೆಗಳನ್ನು ಮಾಡುತ್ತಿದ್ದರು.
