ಉದಯವಾಹಿನಿ , ಕ್ಯಾನ್ಸರ್.. ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆ. ಕ್ಯಾನ್ಸರ್ ಎಂಬ ಪದ ಕೇಳಿದರೆ ಸಾಕು ಬೆಚ್ಚಿ ಬೀಳ್ತಿದ್ದಾರೆ. ಇವತ್ತಿ ಕಾಲದಲ್ಲಿ ಬದಲಾಗುತ್ತಿರುವ ಜೀವನಶೈಲಿಯೊಂದಿಗೆ, ಪ್ರಪಂಚದಾದ್ಯಂತ ಕೊಲೊರೆಕ್ಟಲ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ವಿಶೇಷವಾಗಿ ಯುವಕರು ಈ ಗಂಭೀರ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.
ಕೀಮೋಥೆರಪಿ ಮತ್ತು ಇಮ್ಯುನೊಥೆರಪಿಯಂತಹ ಸಾಂಪ್ರದಾಯಿಕ ಚಿಕಿತ್ಸೆಗಳ ಹೊರತಾಗಿಯೂ, ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ಸಿನ ಪ್ರಮಾಣ ಕಡಿಮೆ. ಆದಾಗ್ಯೂ ಜಪಾನಿನ ವಿಜ್ಞಾನಿಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದಾದ ಆವಿಷ್ಕಾರ ಮಾಡಿದ್ದಾರೆ. ಇದು ಸಣ್ಣ ಕಪ್ಪೆ ಒಂದರ ಕರುಳಿನಲ್ಲಿ ಚಮತ್ಕಾರ ಮಾಡಿದ್ದಾರೆ. ಉಭಯಚರ ಜೀವಿಯಲ್ಲಿ ಕಂಡುಬಂದ ಒಂದು ಸಣ್ಣ ಸೂಕ್ಷ್ಮ ಜೀವಿ, ಬಿಗ್ ರಿಲೀಫ್ ನೀಡುವ ಸೂಚನೆ ಕೊಟ್ಟಿದೆ.
ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ.. ಜಪಾನ್ ಅಡ್ವಾನ್ಸ್ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ನ ಸಂಶೋಧಕರು ಜಪಾನಿನ ಮರದ ಕಪ್ಪೆಗಳ ಕರುಳಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾವನ್ನು ಪರೀಕ್ಷಿಸಿದ್ದಾರೆ. ಜಪಾನಿನ ಮರದ ಕಪ್ಪೆಗಳು , ಫೈರ್ ಬೆಲ್ಲಿ ನ್ಯೂಟ್‌ಗಳು ಮತ್ತು ಹುಲ್ಲು ಹಲ್ಲಿಗಳು ) ಸೇರಿದಂತೆ ಒಟ್ಟು 45 ವಿಭಿನ್ನ ಬ್ಯಾಕ್ಟೀರಿಯಾದ ಪ್ರಭೇದಗಳನ್ನು ಪರೀಕ್ಷೆಗೆ ಬಳಸಿದ್ದರು.
ಅವರ ಉದ್ದೇಶ ಕ್ಯಾನ್ಸರ್ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾ ಕಂಡು ಹಿಡಿಯೋದಾಗಿತ್ತು. ಅದರಲ್ಲಿ ಕೆಲವು ಬ್ಯಾಕ್ಟೀರಿಯಾ ಪ್ರಭೇದಗಳು, ಕ್ಯಾನ್ಸರ್ ವಿರೋಧಿಗುಣಗಳನ್ನು ಹೊಂದಿರೋದನ್ನ ತಿಳಿದುಕೊಂಡಿದ್ದಾರೆ. ಈಗ ಪತ್ತೆ ಹಚ್ಚಿರುವ ಬ್ಯಾಕ್ಟೀರಿಯಾವು ಇಲಿಗಳಲ್ಲಿನ ಶೇಕಡಾ 100 ರಷ್ಟು ಕ್ಯಾನ್ಸರ್ ಗೆಡ್ಡೆಗಳನ್ನು ತೆಗೆದುಹಾಕಿದೆ. ಚಿಕಿತ್ಸೆಯ ನಂತರ, ಕ್ಯಾನ್ಸರ್ಗೆ ಒಳಗಾಗಿದ್ದ ಕೋಶಗಳನ್ನು ಆರೋಗ್ಯಕರವಾಗಿದ್ದ ಇಲಿಗಳ ದೇಹಕ್ಕೆ ನೀಡಲಾಗಿತ್ತು. ಅಚ್ಚರಿ ಅಂದರೆ ಅದು ಮತ್ತೆ ಬೆಳೆಯಲಿಲ್ಲ. ಕ್ಯಾನ್ಸರ್ ಸಂಪೂರ್ಣ ಗುಣಮುಖ ಆಗಿರೋದೇ ಹೆಚ್ಚು ಎಂದು ಅಧ್ಯಯನ ಹೇಳಿದೆ. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ.. ಜಪಾನ್ ಅಡ್ವಾನ್ಸ್ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (JAIST)ನ ಸಂಶೋಧಕರು ಜಪಾನಿನ ಮರದ ಕಪ್ಪೆಗಳ ಕರುಳಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾವನ್ನು ಪರೀಕ್ಷಿಸಿದ್ದಾರೆ. ಜಪಾನಿನ ಮರದ ಕಪ್ಪೆಗಳು , ಫೈರ್ ಬೆಲ್ಲಿ ನ್ಯೂಟ್‌ಗಳು ಮತ್ತು ಹುಲ್ಲು ಹಲ್ಲಿಗಳು ಸೇರಿದಂತೆ ಒಟ್ಟು 45 ವಿಭಿನ್ನ ಬ್ಯಾಕ್ಟೀರಿಯಾದ ಪ್ರಭೇದಗಳನ್ನು ಪರೀಕ್ಷೆಗೆ ಬಳಸಿದ್ದರು. ಅವರ ಉದ್ದೇಶ ಕ್ಯಾನ್ಸರ್ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾ ಕಂಡು ಹಿಡಿಯೋದಾಗಿತ್ತು. ಅದರಲ್ಲಿ ಕೆಲವು ಬ್ಯಾಕ್ಟೀರಿಯಾ ಪ್ರಭೇದಗಳು, ಕ್ಯಾನ್ಸರ್ ವಿರೋಧಿಗುಣಗಳನ್ನು ಹೊಂದಿರೋದನ್ನ ತಿಳಿದುಕೊಂಡಿದ್ದಾರೆ. ಈಗ ಪತ್ತೆ ಹಚ್ಚಿರುವ ಬ್ಯಾಕ್ಟೀರಿಯಾವು ಇಲಿಗಳಲ್ಲಿನ ಶೇಕಡಾ 100 ರಷ್ಟು ಕ್ಯಾನ್ಸರ್ ಗೆಡ್ಡೆಗಳನ್ನು ತೆಗೆದುಹಾಕಿದೆ. ಚಿಕಿತ್ಸೆಯ ನಂತರ, ಕ್ಯಾನ್ಸರ್ಗೆ ಒಳಗಾಗಿದ್ದ ಕೋಶಗಳನ್ನು ಆರೋಗ್ಯಕರವಾಗಿದ್ದ ಇಲಿಗಳ ದೇಹಕ್ಕೆ ನೀಡಲಾಗಿತ್ತು. ಅಚ್ಚರಿ ಅಂದರೆ ಅದು ಮತ್ತೆ ಬೆಳೆಯಲಿಲ್ಲ. ಕ್ಯಾನ್ಸರ್ ಸಂಪೂರ್ಣ ಗುಣಮುಖ ಆಗಿರೋದೇ ಹೆಚ್ಚು ಎಂದು ಅಧ್ಯಯನ ಹೇಳಿದೆ.
