ಉದಯವಾಹಿನಿ : ಬೆಳಗ್ಗೆ ತಿಂಡಿಗೆ ಏನಾದರೂ ಸಿಂಪಲ್ಲಾಗಿ ಮಾಡಬೇಕು ಅಂದುಕೊಂಡಿದ್ದೀರಾ? ಅಥವಾ ಸಂಜೆ ಟೈಂಗೆ ಸೂಪರ್, ಸ್ಪೈಸಿ ಸ್ನ್ಯಾಕ್ಸ್ ತಿನ್ನಬೇಕು ಅಂತ ಅಂದುಕೊಂಡಿದ್ದೀರಾ? ಹಾಗಾದ್ರೆ ಜಿಟಿಜಿಟಿ ಮಳೆಯಲ್ಲಿ ಗಿರ್ಮಿಟ್ ಮಾಡಿಕೊಂಡು ತಿನ್ನಿ ಇದರ ಮಜಾನೇ ಬೇರೆ. ಗಿರ್ಮಿಟ್ ಉತ್ತರ ಕರ್ನಾಟಕದ (ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ) ಜನಪ್ರಿಯ ಸ್ಟ್ರೀಟ್ ಫುಡ್. ಇದು ಸಕ್ಕತ್ ಮಂಡಕ್ಕಿ ತಿಂಡಿ.
ಈ ಗಿರ್ಮಿಟ್ ಮಂಡಕ್ಕಿಗೆ ಖಾರ-ಒಗ್ಗರಣೆ ಮತ್ತು ಮಸಾಲೆ ಮಿಶ್ರಣ ಮಾಡಿದ ಸ್ನ್ಯಾಕ್. ಬೇಲ್ ಪುರಿ ರೀತಿ ಕಂಡರೂ ಖಾರ ಮತ್ತು ಸಾಂಪ್ರದಾಯಿಕ ಮಸಾಲೆಯಿಂದ ಬೇರೆಯಾಗಿರುತ್ತದೆ. ನೀವು ಕೂಡ ಹೀಗೆ ಸುಲಭವಾಗಿ ಮನೆಯಲ್ಲಿ ಮಾಡಬಹುದು. ಉತ್ತರ ಕರ್ನಾಟಕದಲ್ಲಿ ಗಿರ್ಮಿಟ್ ತುಂಬಾ ಫೇಮಸ್. ಕಡಲೆಪುರಿಗೆ ಮಸಾಲೆಗಳನ್ನು ಹಾಕಿ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಕಡಲೆಪುರಿಯಲ್ಲಿ ಬೇಲ್ ಪೂರಿ, ಚುರುಮುರಿ ಮಾಡುತ್ತಾರೆ. ಅದೇ ರೀತಿ ಗಿರ್ಮಿಟ್ ಸಹ ಒಂದು. ಈ ಗಿರ್ಮಿಟ್ ಚಾಟ್ಸ್ ಅಂಗಡಿಗಳಲ್ಲಿ ಸಿಗುತ್ತದೆ. ಆದರೆ ಇದನ್ನು ನೀವು ಮನೆಯಲ್ಲೇ ತುಂಬಾ ಸುಲಭವಾಗಿ ರುಚಿಕರವಾಗಿ ಮಾಡಬಹುದು. ಹಾಗಾದ್ರೆ ಉತ್ತರ ಕರ್ನಾಟಕದವರ ಅಚ್ಚುಮೆಚ್ಚಿನ ತಿಂಡಿಯಾದ ಗಿರ್ಮಿಟ್ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.
ಕಡಲೇಪುರಿ (ಸಪ್ಪೆ) – 2 ಲೀಟರ್ ಹುಣಸೇ ರಸ – 3 ಟೀ ಸ್ಪೂನ್
ಈರುಳ್ಳಿ – 3 ಸಾಸಿವೆ – 1 ಟೀ ಸ್ಪೂನ್ ಹಸಿಮೆಣಸಿನಕಾಯಿ – 4
ಇಂಗು – ಚಿಟಿಕೆ ಕರಿಬೇವು – ಸ್ವಲ್ಪ ಕಡಲೇಬೀಜ – ಕಾಲು ಕಪ್
ಕೊತ್ತಂಬರಿಸೊಪ್ಪು – ಕಾಲು ಕಪ್ ಬೆಲ್ಲ ತುರಿ – 1 ಟೀ ಸ್ಪೂನ್
ಅಚ್ಚಖಾರದಪುರಿ – ಅರ್ಧ ಟೀ ಸ್ಪೂನ್ ಹುರಿಗಡಲೇಪುಡಿ – 1 ಟೀ ಸ್ಪೂನ್
ಅರಿಶಿಣಪುಡಿ – ಕಾಲು ಟೀ ಸ್ಪೂನ್ ನಿಂಬೆರಸ – ಅರ್ಧ ಟೀ ಸ್ಪೂನ್
ಸೇವ್ – ಅರ್ಧ ಕಪ್ ಎಣ್ಣೆ – 3 ಟೀ ಸ್ಪೂನ್ ಟೊಮೆಟೋ – 2
ಕ್ಯಾರೆಟ್ ತುರಿ – ಅರ್ಧ ಕಪ್
