
ಉದಯವಾಹಿನಿ : ಶ್ರೀಲಂಕಾ ವಿರುದ್ದದ ಟಿ20ಐ ಸರಣ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದ ಹೊರತಾಗಿಯೂ ವೇಗದ ಬೌಲರ್ ಜೋಫ್ರಾ ಆರ್ಚರ್‌ಗೆ ಸ್ಥಾನವನ್ನು ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಆಷಸ್ ಟೆಸ್ಟ್ ಸರಣಿಯ ವೇಳೆ ಜೋಫ್ರಾ ಆರ್ಚರ್‌ಗೆ ಗಾಯಕ್ಕೆ ತುತ್ತಾಗಿದ್ದರು. ಶ್ರೀಲಂಕಾ ವಿರುದ್ಧದ ವೈಟ್‌ಬಾಲ್ ಸರಣಿಗಳಿಗೆ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಂಭಾವ್ಯ ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ.
ಶ್ರೀಲಂಕಾದಲ್ಲಿ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಗಳನ್ನು ಆಡುವ ಮೂಲಕ ಫೆಬ್ರವರಿ 7 ರಂದು ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗಲಿದೆ. ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ಜೋಫ್ರಾ ಆರ್ಚರ್ ಇನ್ನೂ ಸಂಪೂರ್ಣವಾಗಿ ಫಿಟ್ ಇಲ್ಲ. ಅವರು ಶ್ರೀಲಂಕಾ ವೈಟ್‌ಬಾಲ್ ಸರಣಿಗಳಲ್ಲಿ ಅವರು ಆಡುವುದಿಲ್ಲ. ಆದರೆ, ಟಿ20 ವಿಶ್ವಕಪ್ ಸಂಭಾವ್ಯ ಇಂಗ್ಲೆಂಡ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಜಾಶ್ ಟಾಂಗ್ ಇನ್ನೂ ಇಂಗ್ಲೆಂಡ್ ತಂಡದ ಒಂದೇ ಒಂದು ವೈಟ್‌ಬಾಲ್ ಪಂದ್ಯವನ್ನು ಆಡಿಲ್ಲ, ಆದರೆ ಆಷಸ್ ಟೆಸ್ಟ್ ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಹ್ಯಾರಿ ಬ್ರೂಕ್ ನಾಯಕತ್ವದ ತಂಡದಲ್ಲಿ ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಜಾಕೋಬ್ ಬೆಥೆಲ್, ಸ್ಯಾಮ್ ಕರನ್, ಬೆನ್ ಡಕೆಟ್ ಹಾಗೂ ಫಿಲ್ ಸಾಲ್ಟ್ ಸ್ಥಾನವನ್ನು ಪಡೆದಿದ್ದಾರೆ.
