ಉದಯವಾಹಿನಿ , ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸತತ ಗಾಯಗಳ ಕಾರಣ ಟೆಸ್ಟ್ ತಂಡದಲ್ಲಿ ದೀರ್ಘಾವಧಿ ಆಡಲು ಸಾಧ್ಯವಾಗಿಲ್ಲ. ಅವರು ಬೆನ್ನು ನೋವಿನ ಕಾರಣ ಹಲವು ವರ್ಷಗಳ ಹಿಂದೆ ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿದ್ದರು. ಆದರೆ, ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ , ಹಾರ್ದಿಕ್ ಪಾಂಡ್ಯಗೆ ಇನ್ನೂ ದೀರ್ಘಾವಧಿ ಸ್ವರೂಪದಲ್ಲಿ ಆಡಲು ಅವಕಾಶವಿದೆ ಎಂದು ಹೇಳಿದ್ದಾರೆ. ಅಲ್ಲದೆ, ಟೆಸ್ಟ್ ತಂಡದ ಪ್ಲೇಯಿಂಗ್ xiನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು ಎಂದು ಕನ್ನಡಿಗ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಅರ್ಥಪೂರ್ಣ ಪಾತ್ರವನ್ನು ವಹಿಸಬಹುದೆಂದು ನಂಬಿದ್ದಾರೆ, ಅವರು ಕೆಂಪು-ಚೆಂಡಿನ ಸ್ವರೂಪಕ್ಕೆ ಮರಳಲು ಆರಿಸಿಕೊಂಡರೆ ಆಲ್‌ರೌಂಡರ್ ಭಾರತಕ್ಕೆ 7ನೇ ಕ್ರಮಾಂಕಕ್ಕೆ ಆಯ್ಕೆಯಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪಾಂಡ್ಯ ಅವರ ಪ್ರಸ್ತುತ ಫಿಟ್‌ನೆಸ್ ಮತ್ತು ಕೌಶಲ ಟೆಸ್ಟ್ ಕಮ್‌ಬ್ಯಾಕ್‌ಗೆ ಅವಾಸ್ತವಿಕವಲ್ಲ ಎಂದು ಉತ್ತಪ್ಪ ಭಾವಿಸಿದ್ದಾರೆ. ಭಾರತ ಟೆಸ್ಟ್ ತಂಡದಲ್ಲಿ ಇತ್ತೀಚೆಗೆ ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಕಂಡೀಷನ್ಸ್‌ಗೆ ತಕ್ಕಂತೆ ಬಳಿಸಿಕೊಳ್ಳಲಾಗಿತ್ತು. ಆದರೆ, ಇವರ ಪೈಕಿ ಯಾವ ಆಟಗಾರ ಸ್ಥಿರವಾಗಿ ಒಂದು ಕ್ರಮಾಂಕದಲ್ಲಿ ಆಡುತ್ತಿಲ್ಲ. ಹಾಗಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಟೆಸ್ಟ್ ತಂಡಕ್ಕೆ ಸೂಕ್ತ ಎಂದು ಹೇಳಿದ್ದಾರೆ.
