ಉದಯವಾಹಿನಿ , ವಿರಾಟ್‌ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ ದಹಲಿ ತಂಡ, 2025-26ರ ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಈ ಟೂರ್ನಿಯಲ್ಲಿ ದೆಹಲಿ ತಂಡ ಗೆಲುವಿನ ಲಯವನ್ನು ಮುಂದುವರಿಸಿದೆ. ಅಂದ ಹಾಗೆ ಈ ಪಂದ್ಯದಲ್ಲಿಯೂ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಕೇವಲ 22 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಅಂದ ಹಾಗೆ ಸೌರಾಷ್ಟ್ರ ನೀಡಿದ್ದ 321 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದೆಹಲಿ, 7 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.
ಆರಂಭಿಕ ಬ್ಯಾಟ್ಸ್‌ಮನ್‌ ಅರ್ಪಿತ್‌ ರಾಣಾ ಅವರು ಬಹುಬೇಗ ವಿಕೆಟ್‌ ಒಪ್ಪಿಸಿದ ಬಳಿಕ ದೆಹಲಿ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಪ್ರಿಯಾಂಶ್‌ ಆರ್ಯ 48 ಎಸೆತಗಳಲ್ಲಿ 75 ರನ್‌ ಸಿಡಿಸುವ ಮೂಲಕ ದೆಹಲಿ ತಂಡಕ್ಕೆ ಆಸರೆಯಾಗಿದ್ದರು. ಪ್ರಿಯಾಂಶ್‌ ಆರ್ಯ ವಿಕೆಟ್‌ ಒಪ್ಪಿಸಿದ ಬಳಿಕ ದೆಹಲಿ ತಂಡ ನಿತೀಶ್‌ ರಾಣಾ ಹಾಗೂ ರಿಷಭ್‌ ಪಂತ್‌ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಲೆ ಸೌರಾಷ್ಟ್ರ ತಂಡ ಪಂದ್ಯದ ಮೇಲೆ ಪ್ರಾಬಲ್ಯವನ್ನು ಸಾಧಿಸಿತು.

ದೆಹಲಿ ತಂಡಕ್ಕೆ ರಿಷಭ್‌ ಪಂತ್‌ ಕೀ ಆಟಗಾರ. ಆದರೆ, ಅವರು ಇನ್ನೂ ದೆಹಲಿ ಪರ ದೊಡ್ಡ ಇನಿಂಗ್ಸ್‌ ಆಡಿಲ್ಲ. ಭಾರತ ಏಕದಿನ ತಂಡದಿಂದ ದೀರ್ಘಾವಧಿ ಹೊರಗುಳಿದಿದ್ದಾರೆ. ಇದೀಗ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. ಆದರೆ, ಅವರಿಂದ ಇನ್ನು ದೇಶಿ ಕ್ರಿಕೆಟ್‌ನಲ್ಲಿ ದೊಡ್ಡ ಇನಿಂಗ್ಸ್‌ ಬಂದಿಲ್ಲ. ಹಾಗಾಗಿ ಭಾರತ ಏಕದಿನ ತಂಡದಲ್ಲಿ ಅವರಿಗೆ ಸ್ಥಾನ ನೀಡುವುದು ಅನುಮಾನ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!