(ವರದಿಗಾರರು ಅಯ್ಯಣ್ಣ ಮಾಸ್ಟರ್ ಉದಯ ವಾಹಿನಿ ಪೀಣ್ಯ ದಾಸರಹಳ್ಳಿ)
ಉದಯವಾಹಿನಿ ,ಪೀಣ್ಯ ದಾಸರಹಳ್ಳಿ
: ಕ್ಷೇತ್ರದ ಚೊಕ್ಕಸಂದ್ರದ ಶ್ರೀ ಕುಂತಿಯಮ್ಮ ದೇವಿ ಟ್ರಸ್ಟ್ ಮತ್ತು ಚೊಕ್ಕಸಂದ್ರ ಗ್ರಾಮಸ್ಥರ ವತಿಯಿಂದ ದಿನಾಂಕ: 20 ಜುಲೈ 2023 ರಂದು ಗುರುವಾರ ಸಂಜೆ 05-30ಕ್ಕೆ ಶ್ರೀ ವಿಶ್ವಕ್ಕೆನ, ಗಣಪತಿ ಪೂಜೆ, ಪುಣ್ಯಾಹ, ಕಳಸ,ರಕ್ಷಾ ಬಂಧನ ಮತ್ತು ಸಂಗ್ರಹಣ, ಅಂಕುರಾರ್ಪಣೆ,ವಾಸ್ತುಪೂಜೆ, ಬಲಿವಾಸ್ತು,ಪ್ರರ್ಯಾಗ್ನಿ,ಮಾನುನ್ಯ ಹೋಮ,ಅಧಿವಾಸಹೋಮ,ಪಂಚಗವ್ಯ ಸ್ನಪನ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಎರಡನೇ ದಿನವಾದ ದಿನಾಂಕ 21 ಜುಲೈ 2023ರಂದು ಶುಕ್ರವಾರ ಬೆಳಿಗ್ಗೆ 5 ಗಂಟೆ ಯಿಂದ 6-00ಗಂಟೆರೊಳಗೆ ಬ್ರಾಹ್ಮೀ ಮುಹೂರ್ತದಲ್ಲಿ ಸುಪ್ರಭಾತ,ಪಿಂಡಿಕಾ ಪೂಜಾ,ಯಂತ್ರ ಸ್ಥಾಪನೆ, ಕಳಸ ಸ್ಥಾಪನೆ, ಕುಂಭಾರಾಧನೆ, ಅಗ್ನಿಪ್ರತಿಕ್ಷಾತ್ಮತ್ಯನ್ಯಾಸ, ಹೋಮಗಳ ಪ್ರದಾನ, ಪರಿವಾರ, ಪಂಚ ಸೂಕ್ತ, ಪ್ರಾಯಶ್ಚಿತ್ತ, ಶಾಂತಿಹೋಮಗಳು, ಮಹಾಪೂರ್ಣಹುತಿ, ಕುಂಭಾ,ಧಾಮ, ಗ್ರಾಮಪ್ರದಕ್ಷಿಣೆ,ಪಂಚಾಮೃತ,ಮಹಾ ಕುಂಭಾಭಿಷೇಕ,ವಿಶೇಷ ಅಲಂಕಾರ, ಆರಾಧನೆ, ಗೋದೀಪ,ದರ್ಶನ, ಕಊಷ್ಮಆಂಡಕದಲಿ,ಛೇದನಾ, ಶ್ರೀಸ್ವಾಮಿ ದರ್ಶನಾ, ಅಷ್ಟೋತ್ತರ,ಅಷ್ಟವದಾನ ಸೇವೆ ಮಹಾಮಂಗಳಾರತಿ,ಮಹಾಶೀರ್ವಾದ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದ್ದು ಭಕ್ತರು ಸಾರ್ವಜನಿಕರು ದೇವರ ಕೃಪೆಗೆ ಪಾತ್ರರಾಗ ಬೇಕೆಂದು ಎಂದು ಚೊಕ್ಕಸಂದ್ರ ಯುವ ಮುಖಂಡ ನಾಗರಾಜ್ ಯಾದವ್ ಉದಯ ವಾಹಿನಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
