ಉದಯವಾಹಿನಿ, ಸಿದ್ದಾಪುರ : ಸಮೀಪದ ಮಾಲ್ದಾರೆ ಗ್ರಾಮದ ಮೊಲಗು ಮನೆ ಎಸ್ಟೇಟ್ ನ ಕಾಫಿ ತೋಟದಲ್ಲಿ   7ಅಡಿ ಉದ್ದದ ಹೆಬ್ಬಾವನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ತೋಟದಲ್ಲಿ ಹೆಬ್ಬಾವನ್ನು  ಕಂಡು ಸ್ಥಳೀಯರು ಹಾಗೂ ಕಾರ್ಮಿಕರು ಆತಂಕ ಆತಂಕಕ್ಕೀಡಾಗಿದ್ದರು  ತೋಟಕ್ಕೆ ತೆರಳಿದ ಕಾರ್ಮಿಕರು ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮಲಗಿದ್ದ ಹೆಬ್ಬಾವನ್ನು ಕಂಡು ಭಯಭೀತರಾಗಿದ್ದರು ಬಳಿಕ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ತಿತಿಮತಿ ಅರಣ್ಯ ಇಲಾಖೆ ಸಿಬ್ಬಂದಿಗಳು 7 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು. ಈ ಸಂದರ್ಭ  ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ್,ಆರ್. ಆರ್. ಟಿ. ಸಿಬ್ಬಂದಿಗಳಾದ ಗುರು, ಹರಿಪ್ರಸಾದ್, ಸಚಿನ್, ದನು, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!