ಉದಯವಾಹಿನಿ, ಜೇವರ್ಗಿ: ಖ್ಯಾತ ವೈದ್ಯರಾದ ಶ್ರೀ ಡಾ.ಎಸ್ ಎಸ್ ಪಾಟೀಲ ಸರ್ ಅವರು ಇಂದು ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ,ನಮ್ಮ ಜೇವರ್ಗಿ ತಾಲ್ಲೂಕಿನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಪರೂಪ ವೈದ್ಯರು. ಜನಸೇವೆಯೇ ಜನಾರ್ಧನ ಸೇವೆ ಎಂದು ಇಡೀ ತನ್ನ ಜೀವನವನ್ನೇ ಜನರಿಗೋಸ್ಕರ ಸೇವೆ ಮಾಡಿದ ಮಹಾನ್ ವ್ಯಕ್ತಿ ವೈದ್ಯಲೋಕದ ದೇವತಾ ಮನುಷ್ಯ ಜೇವರ್ಗಿ ತಾಲ್ಲೂಕಿನ ಸಾವಿರಾರು ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಅಪಾರ ಸೇವೆ ಸಲ್ಲಿಸಿದ್ದರು. ಎಷ್ಟರ ಮಟ್ಟಿಗೆ ಅಂದರೆ ಅವರ ಕುಟುಂಬಕ್ಕೆ ಅವರು ಸಮಯ ಕೊಡಲಿಲ್ಲ ಸರ್ಕಾರಿ ಕೆಲಸ ಬಹಳ ಶ್ರದ್ಧೆಯಿಂದ ಮಾಡುತ್ತಿದ್ದರು ಕೇವಲ ದುಡ್ಡಿಗೋಸ್ಕರ ವೈದ್ಯ ವೃತ್ತಿ ಮಾಡಲಿಲ್ಲ ಬದಲಿಗೆ ಸದಾ ಬಡವರಿಗಾಗಿ ತನ್ನ ಜೀವವನ್ನು ಮುಡಿಪಾಗಿಟ್ಟ ಡಾ. ಎಸ್ ಎಸ್ ಪಾಟೀಲ “ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಿಷ್ಠೆಯಿಂದ ರೋಗಿಗಳ ಸೇವೆ ಮಾಡಿದ್ದು ಜೇವರ್ಗಿ ಜನತೆ ಮರೆಯುವುದಿಲ್ಲ. ಅನೇಕ ರೋಗಿಗಳು ಎಸ್ ಎಸ್ ಪಾಟೀಲ್ ಮುಟ್ಟಿದರೆ ಆರಾಮ್ ಆಗುತ್ತೆ ಎನ್ನುವ ಮನೋಭಾವನೆ ಹೊಂದಿದವರು. ಇವರ ಸೇವೆ ಜೇವರ್ಗಿ ತಾಲೂಕಿಗೆ ಅಪಾರವಾಗಿದ್ದೇವೆ ಎಂದು ಸಿದ್ದರಾಮಪ್ಪಗೌಡ ಪಾ
ಟೀಲ ಹರನೂರ ಅಭಿಪ್ರಾಯಪಟ್ಟಿದ್ದಾರೆ.
