ಉದಯವಾಹಿನಿ, ಅಹಮದಾಬಾದ್‌: ಪ್ರಸ್ತುತ ನಡಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ತನ್ನ ಗೆಲುವಿನ ಲಯವನ್ನು ಮುಂದುವರಿಸಿದೆ. ಇಲ್ಲಿನ ಎಡಿಎಸ್‌ಎ ರೈಲ್ವೇಸ್‌ ಗ್ರೌಂಡ್‌ನಲ್ಲಿ ಬುಧವಾರ ನಡೆದಿದ್ದ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ಅವರ ನಾಯಕತ್ವದ ಕರ್ನಾಟಕ ತಂಡ 67 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ನಾಯಕ ಮಯಾಂಕ್‌ ಅಗರ್ವಾಲ್‌ ಹಾಗೂ ದೇವದತ್‌ ಪಡಿಕ್ಕಲ್‌ ಇಬ್ಬರೂ ತಲಾ ಶತಕಗಳನ್ನು ಬಾರಿಸಿ ಕರ್ನಾಟಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.
ಈ ಪಂದ್ಯದಲ್ಲಿ ಕರ್ನಾಟಕ ತಂಡ ನೀಡಿದ್ದ 364 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಂಡಿಚೇರಿ ತಂಡ, ಕಠಿಣ ಹೋರಾಟ ನಡೆಸಿದ ಹೊರತಾಗಿಯೂ 50 ಓವರ್‌ಗಳಿಗೆ 296 ರನ್‌ಗಳಿಗೆ ಆಲ್‌ಔಟ್‌ ಆಯಿತು.
ಆ ಮೂಲಕ 67 ರನ್‌ಗಳಿಂದ ಸೋಲು ಅನುಭವಿಸಿತು. ಪಾಂಡಿಚೇರಿ ಆರಂಭಿಕ ಬ್ಯಾಟ್ಸ್‌ಮನ್‌ ನೆಯಾನ್‌ ಶ್ಯಾಮ್‌ ಕಂಗಯಾನ್‌ (68 ರನ್‌) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಜಯಂತ್‌ ಯಾದವ್‌ (54) ಅವರು ಅರ್ಧಶತಕಗಳನ್ನು ಗಳಿಸಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಪಾಂಡಿಚೇರಿ ತಂಡ 300ರ ಸನಿಹ ಬಂದು ಸೋಲು ಒಪ್ಪಿಕೊಂಡಿತು. ಪಾಂಡಿಚೇರಿ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಸೋಲು ಅನುಭವಿಸುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕುಸಿದಿದೆ.ಕರ್ನಾಟಕ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಮನ್ವಂತ್‌ ಕುಮಾರ್‌ ಎಲ್‌ ಮೂರು ವಿಕೆಟ್‌ ಪಡೆದರೆ, ಕರುಣ್‌ ನಾಯರ್‌ ಹಾಗೂ ವಿದ್ವತ್‌ ಕಾವೇರಪ್ಪ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.

Leave a Reply

Your email address will not be published. Required fields are marked *

error: Content is protected !!