ಉದಯವಾಹಿನಿ, ಕಾಬುಲ್ : ಭಾರತ ಮತ್ತು ಶ್ರೀಲಂಕಾದಲ್ಲಿ ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ, 15 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಿದೆ. ಸ್ಪಿನ್ ಆಲ್‌ರೌಂಡರ್ ರಶೀದ್ ಖಾನ್ ತಂಡವನ್ನು ಮುನ್ನಡೆಸಲಿದ್ದು, ಗುಲ್ಬದಿನ್ ನೈಬ್ ಮತ್ತು ನವೀನ್ ಉಲ್ ಹಕ್ ತಂಡಕ್ಕೆ ಮರಳಿದ್ದಾರೆ.
2024ರ ಟಿ 20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನವು ಅತ್ಯುತ್ತಮ ತಂಡಗಳಲ್ಲಿ ಒಂದಾಗಿತ್ತು. ಸೆಮಿಫೈನಲ್ ತಲುಪಿತ್ತು ಮತ್ತು ಆ ಪ್ರಗತಿಯನ್ನು 2026 ರ ಆವೃತ್ತಿಯಲ್ಲೂ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ವಿಶ್ವಕಪ್‌ಗೂ ಮುನ್ನ ಈ 15 ಜನರ ತಂಡವು ಜನವರಿ 19 ರಿಂದ 22ರವರೆಗೆ ಯುಎಇಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾಗವಹಿಸಲಿದ್ದು, ಜಾಗತಿಕ ಟೂರ್ನಮೆಂಟ್‌ಗೆ ಸಿದ್ಧತೆ ನಡೆಸಲಿದೆ.ಭುಜದ ಗಾಯದಿಂದ ಚೇತರಿಸಿಕೊಂಡಿರುವ ನವೀನ್, ಕೊನೆಯ ಬಾರಿಗೆ 2024 ರ ಡಿಸೆಂಬರ್‌ನಲ್ಲಿ ಟಿ20ಐ ಆಡಿದ್ದರು ಮತ್ತು ಅಂದಿನಿಂದ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಗುಲ್ಬಾದಿನ್ ಸೇರ್ಪಡೆಯು ಮಧ್ಯಮ ಕ್ರಮಾಂಕಕ್ಕೆ ಅನುಭವ ಮತ್ತು ಸಮತೋಲನವನ್ನು ತರುತ್ತದೆ.
“ತಂಡಕ್ಕೆ ಗಮನಾರ್ಹ ಸೇರ್ಪಡೆ ಮುಜೀಬ್ ಉರ್ ರೆಹಮಾನ್, ಇದರಿಂದಾಗಿ ಗಜನ್‌ಫರ್ ಅವರನ್ನು ಆಟಗಾರರ ಮೀಸಲು ಪೂಲ್‌ನಲ್ಲಿ ಇರಿಸಲಾಗಿದೆ” ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
