ಉದಯವಾಹಿನಿ, ಚಿಂಚೋಳಿ: ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಬಾರದೆ ರೈತರು ಸಾರ್ವಜನಿಕರು ಮುಗಿಲಿನತ್ತ ನೋಡುತ್ತಾ ಮಳೆಗಾಗಿ ದೇವರು ಮೋರೆ ಹೋಗುತ್ತಿದ್ದರು ಆದರೆ ಕಳೆದ ಎರಡು ದಿನಗಳಿಂದ ಜಿಟಿಜಿಟಿಯಾಗಿ ಮಳೆ ಸುರಿಯುತ್ತಿರುವುದರಿಂದ ಮೂಡಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವಾಡಿಕೆಯಂತೆ ತಾಲ್ಲೂಕಿನಾದ್ಯಂತ ಮಳೆ ಬರುತ್ತಿದೆ ರೈತರು ಜಮೀನಿನಲ್ಲಿ ಬೆಳೆಗಳಲ್ಲಿ ತೆಗ್ಗು ಪ್ರದೇಶದಲ್ಲಿ ನಿಂತ್ತ ನೀರು ಹೊರಗಡೆ ಹಾಕಬೇಕು ಇಲ್ಲಾದಿದ್ದರೆ ಬೆಳೆಗಳು ನಷ್ಟವಾಗುವ ಸಂಭವ ಇರುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕ ವೀರಶೇಟ್ಟಿ ರಾಠೋಡ್ ತಿಳಿಸಿದ್ದಾರೆ.
ಮಳೆಯ ಪ್ರಮಾಣ: ಚಿಂಚೋಳಿ 68.4ಮಿಮೀ,2) ಕುಂಚಾವರಂ 90.3ಮಿಮೀ,3) ನಿಡಗುಂದಾ 28.0ಮಿಮೀ,4) ಚಿಮ್ಮನಚೋಡ 50.2ಮಿಮೀ,5) ಐನಾಪುರ 65.5ಮಿಮೀ,6) ಸುಲೇಪೇಟ್ 41.6ಮಿಮೀ ತಾಲ್ಲೂಕಿನಾದ್ಯಂತ ಮಳೆಯಾಗಿದೆ.
ಚಂದ್ರಂಪಳ್ಳಿ ಜಲಾಶಯ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯವು ಕಳೆದ ಎರಡು ದಿನಗಳಿಂದ ಜಿಟಿಜಿಟಿಯಾಗಿ ಸುರಿಯುತ್ತಿರುವ ಮಳೆಯಿಂದ ಚಂದ್ರಂಪಳ್ಳಿ ಜಲಾಶಯದ ಒಳಹರಿವು 411ಕ್ಯೂಸೇಕ್ ನೀರು,ಗರಿಷ್ಠ ಮಟ್ಟ 1618 ಅಡಿವಿದ್ದು,ಇಂದಿನ ಮಟ್ಟ 1596 ನೀರಿನ ಮಟ್ಟವಿದೆ,ಗರಿಷ್ಠ ಮಟ್ಟ ನೀರು ತಲುಪಲು ಇನ್ನು 22ಅಡಿ ನೀರು ಬಾಕಿವಿದೆ ಎಂದು ಚಂದ್ರಂಪಳ್ಳಿ ಜಲಾಶಯ ಎಇಇ ಚೇತನ ಕಳಸ್ಕರ ತಿಳಿಸಿದ್ದಾರೆ.
ನಾಗರಾಳ ಜಲಾಶಯ: ತಾಲ್ಲೂಕಿನ ಅತಿದೊಡ್ಡ ನಾಗರಾಳ ಜಲಾಶಯ 491.00ಮೀಟರ್ ನೀರಿನ ಗರಿಷ್ಠಮಟ್ಟ,490.55ಮೀಟರ್ ನೀರಿನ ಮಟ್ಟವಿದ್ದು,ಒಳಹರಿವು 600ಕ್ಯೂಸೇಕ್ ವಿದ್ದು,ಹೊರಹರಿವು 750ಕ್ಯೂಸೇಕ್ ನೀರು ನದಿಗೆ ಬಿಡಲಾಗುತ್ತಿದೆ ಎಂದು ಜಲಾಶಯ ಎಇಇ ವಿನಾಯಕ ತಿಳಿಸಿದ್ದಾರೆ.
ಚಂದಾಪೂರದ ಪಟೇಲ ಕಾಲೋನಿ: ನಗರದ ಚಂದಾಪೂರದ ಪಟೇಲ ಕಾಲೋನಿಯಲ್ಲಿ ಸತತವಾಗಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಟೇಲ ಕಾಲೋನಿಯಲ್ಲಿ ನೀರು ಸಗಸವಾಗಿ ಸಾಗದೆ ನೀರು ತುಂಬಿಕೊಂಡು ಮನೆ ಹಾಗೂ ಹೊಲಗಳಲ್ಲಿ ಮತ್ತು ಅಂಗಡಿಗಳಲ್ಲಿ ನೀರು ತುಂಬಿಕೊಂಡಿದ್ದು ದವಸ ಧಾನ್ಯಗಳು ಹಾಳಾಗಿವೆ.
ಬಸವನಗರ ಕಾಲೋನಿಯಲ್ಲಿ ಮಳೆಯಿಂದ ಚರಂಡಿಗಳಲ್ಲಿ ಸರಸವಾಗಿ ಸಾಗದೆ ರಸ್ತೆಗಳಲ್ಲಿ ಚರಂಡಿ ನೀರು ತುಂಬಿಕೊಂಡಿದ್ದು,ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ವಿದ್ಯುತ್ ವ್ಯತ್ಯಯ: ಸತತವಾಗಿ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಸಂಪರ್ಕ ಕಣ್ಣುಮುಚ್ಚಲೆ ಆಟವಾಡುತ್ತಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

Leave a Reply

Your email address will not be published. Required fields are marked *

error: Content is protected !!