

ಉದಯವಾಹಿನಿ, ಬೆಂಗಳೂರು /ಕೆಂಗೇರಿ : ಕೋಟಿ ಗೀತಾ ಲೇಖನ ಯಜ್ಞ ಬರೆದು ಭಗವಂತನ ಕೃಪೆಗೆ ಪಾತ್ರರಾಗಿ ಎಂದು ಉಡುಪಿ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೆoದ್ರ ತೀರ್ಥರು ಕರೆ ನೀಡಿದರು,
ಅವರು ಕೆಂಗೇರಿ ಉಪನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅನುಗ್ರಹಿಸಿ ಆಶೀರ್ವಾಚನ ನೀಡಿ ಭಗವದ್ ಗೀತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿ ಎಂದರು,
ಹಾಗೇ ಈ ಬಾರಿ 2024-25 ರ ಪರ್ಯಾಯ ಮಹೋತ್ಸವವು ತಮ್ಮ ನಾಲಕ್ಕನೆ ಪರ್ಯಾಯವಾಗಿದ್ದು ಆ ಸಂದರ್ಭದಲ್ಲಿ ಭಕ್ತರು ಉಡುಪಿಗೆ ಬಂದು ನೀವು ಬರೆದಿರುವ ಭಗವದ್ಗೀತೆ ಯನ್ನು ಶ್ರೀಕೃಷ್ಣನಿಗೆ ಅರ್ಪಿಸಿ ಮತ್ತೆ ಅದನ್ನು ಪ್ರಸಾದ ರೂಪವಾಗಿ ಮರಳಿ ಪಡೆದು ನಿಮ್ಮ ಮನೆಯ ದೇವರ ಮನೆಯಲ್ಲಿ ಇಟ್ಟು ಪೂಜಿಸಿ ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ಗೀತಾ ದೀಕ್ಷೆಯನ್ನು ಅಪೇಕ್ಷಿತ ಭಕ್ತರಿಗೆ ಅನುಗ್ರಹಿಸಿದರು.
