ಉದಯವಾಹಿನಿ, ಈ ಬಾರಿ ಡಬ್ಲ್ಯೂಪಿಎಲ್‌ನಿಂದ ಹಿಂದೆ ಸರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಆಲ್‌ರೌಂಡರ್‌ ಆಟಗಾರ್ತಿ ಎಲ್ಲಿಸ್‌ ಪೆರ್ರಿ ಈಗ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ವುಮೆನ್ಸ್‌ ಸೂಪರ್‌ ಸ್ಮಾಶ್‌ ಕ್ರಿಕೆಟ್‌ ಲೀಗ್‌ನಲ್ಲಿ ಆಡುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಂದ ಆರ್‌ಸಿಬಿ ಪರ ಆಡುತ್ತಿಲ್ಲ ಎಂದಿರುವ ಆಸ್ಟ್ರೇಲಿಯಾದ ಎಲ್ಲಿಸ್‌ ಪೆರ್ರಿ ಈಗ ವೆಲ್ಲಿಂಗ್ಟನ್‌ ವುಮೆನ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಡಿ.31 ರಂದು ನಾರ್ಥನ್‌ ಡಿಸ್ಟ್ರಿಕ್ಟ್ಸ್ ವುಮೆನ್‌ ವಿರುದ್ಧದ ಪಂದ್ಯದಲ್ಲಿ ಪೆರ್ರಿ 39 ರನ್‌(31 ಎಸೆತ, 1 ಬೌಂಡರಿ, 4 ಸಿಕ್ಸ್‌) ಹೊಡೆದರೆ ಬೌಲಿಂಗ್‌ನಲ್ಲಿ 4 ಓವರ್‌ ಎಸೆದು 3 ವಿಕೆಟ್‌ ಕಿತ್ತು ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
2024ರಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಪೆರ್ರಿ ಗಮನಾರ್ಹ ಕೊಡುಗೆ ನೀಡಿದ್ದರು. ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವುದರ ಜೊತೆ ಉತ್ತಮವಾಗಿ ಬೌಲಿಂಗ್‌ ಮಾಡಿದ್ದರು. ಅಷ್ಟೇ ಅಲ್ಲದೇ ಪಂದ್ಯಾವಳಿಯಲ್ಲಿ ಆರು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

WPL ನಲ್ಲಿ ಆಡಿದ 25 ಪಂದ್ಯಗಳಲ್ಲಿ, ಪೆರ್ರಿ ಎಂಟು ಅರ್ಧಶತಕಗಳನ್ನು ಒಳಗೊಂಡಂತೆ 972 ರನ್ ಹೊಡೆದಿದ್ದಾರೆ. 8.25 ರ ಎಕಾನಮಿ ದರದಲ್ಲಿ 14 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಪೆರ್ರಿ ಲಭ್ಯವಿಲ್ಲದ ಕಾರಣ ಆರ್‌ಸಿಬಿ ಈಗ ದಕ್ಷಿಣ ಆಫ್ರಿಕಾದ ನಾಡಿನ್ ಡಿ ಕ್ಲರ್ಕ್ ಅವರನ್ನು 30 ಲಕ್ಷ ರೂ. ನೀಡಿ ಖರೀದಿಸಿದೆ.

ಈ ಹಿಂದೆ ಗುಜರಾತ್ ಜೈಂಟ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಸತ್‌ಘರೆ ಕಳೆದ ತಿಂಗಳ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ. ಆರ್‌ಸಿಬಿ ತಂಡವು ಜನವರಿ 9 ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

 

 

Leave a Reply

Your email address will not be published. Required fields are marked *

error: Content is protected !!