ಉದಯವಾಹಿನಿ, 2026 ರ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್​ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ ತಂಡದಿಂದ ಸಾಂಘಿಕ ಪ್ರದರ್ಶನ ಮೂಡಿಬರುತ್ತಿಲ್ಲ. ಕೆಲವು ಪಂದ್ಯಗಳಲ್ಲಿ ಬ್ಯಾಟ್ಸ್​ಮನ್​ಗಳು ಕೈಕೊಟ್ಟರೆ, ಇನ್ನು ಕೆಲವು ಪಂದ್ಯಗಳಲ್ಲಿ ಬೌಲರ್​ಗಳು ತೀರ ದುಬಾರಿಯಾಗುತ್ತಿದ್ದಾರೆ. ಇದು ಆಡಳಿತ ಮಂಡಳಿಗೆ ಹೊಸ ತಲೆನೋವು ತಂದಿದೆ.
ಅದರಲ್ಲೂ ತಂಡದ ಬೌಲಿಂಗ್ ವಿಭಾಗ ಅಷ್ಟು ಪರಿಣಾಮಕಾರಿಯಾಗಿ ಕಾಣುತ್ತಿಲ್ಲ. ಜಸ್ಪ್ರೀತ್ ಬುಮ್ರಾರನ್ನು ಹೊರತುಪಡಿಸಿ ಮತ್ತ್ಯಾವ ಬೌಲರ್​ ಕೂಡ ಲಯದಲ್ಲಿ ಕಾಣುತ್ತಿಲ್ಲ. ಹಾಗೆಯೇ ಭವಿಷ್ಯದಲ್ಲಿ ಬುಮ್ರಾರನ್ನು ಬದಲಾಯಿಸುವ ಸಾಮರ್ಥ್ಯವಿರುವ ವೇಗದ ಬೌಲರ್ ಭಾರತದಲ್ಲಿ ಪ್ರಸ್ತುತ ಇಲ್ಲ. ಅದಕ್ಕಾಗಿಯೇ ಬಿಸಿಸಿಐ ಈಗ ಈ ಸಮಸ್ಯೆಯನ್ನು ಪರಿಹರಿಸಲು ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರ ಸಹಾಯವನ್ನು ಕೋರಿದೆ.

ಬಿಸಿಸಿಐ ಜಹೀರ್ ಖಾನ್ ಅವರಿಗೆ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಈ ತಿಂಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವಿಶೇಷ ತರಬೇತಿ ಶಿಬಿರ ನಡೆಯಲಿದ್ದು, ದೇಶದ ಅಗ್ರ ವೇಗದ ಬೌಲರ್‌ಗಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಜಹೀರ್ ಖಾನ್ ಬೌಲರ್​ಗಳಿಗೆ ತರಬೇತಿ ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!