ಉದಯವಾಹಿನಿ, ವಿಶ್ವ ಫುಟ್‌ಬಾಲ್ ಫೆಡರೇಷನ್‌ನ (ಫಿಫಾ) ರೆಫ್ರಿಗಳ ಪಟ್ಟಿಗೆ ಒಬ್ಬ ಮಹಿಳೆ ಸೇರಿ ಭಾರತದ ಇನ್ನೂ ಮೂವರನ್ನು ಸೇರಿಸಲಾಗಿದೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ತಿಳಿಸಿದೆ. ಒಟ್ಟು 5 ಮಂದಿ ಭಾರತೀಯರು ಸ್ಥಾನ ಪಡೆದರು. ಗುಜರಾತ್‌ನ ರಚನಾ ಕುಮಾರಿ ಅವರು ಫಿಫಾದ ಮಹಿಳಾ ರೆಫ್ರಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪುದುಚೇರಿಯ ಅಶ್ವಿನ್ ಕುಮಾರ್ ಮತ್ತು ದೆಹಲಿಯ ಆದಿತ್ಯ ಪುರಕಾಯಸ್ಥ ಅವರೂ ರೆಫ್ರಿಗಳ ಪಟ್ಟಿಗೆ ಸೇರಿದ್ದಾರೆ.
ಇದಕ್ಕೂ ಮುನ್ನ ಮುರಳೀಧರನ್ ಪಾಂಡುರಂಗನ್ (ಪುದುಚೇರಿ) ಮತ್ತು ಪೀಟರ್ ಕ್ರಿಸ್ಟೋಫರ್ (ಮಹಾರಾಷ್ಟ್ರ) ಅವರನ್ನು ಸಹಾಯಕ ರೆಫರಿಗಳಾಗಿ ಸೇರಿಸಿಕೊಳ್ಳಲಾಗಿತ್ತು. ಅಶ್ವಿನ್ ಮತ್ತು ಆದಿತ್ಯ ಮಲೇಷ್ಯಾದ ಕೌಲಾಲಂಪುರದಲ್ಲಿ ತಮ್ಮ AFC ರೆಫರಿ ಅಕಾಡೆಮಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. 2026 ರ ಫಿಫಾ ಪಟ್ಟಿಯಲ್ಲಿ ಭಾರತದ 19 ಪಂದ್ಯ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ.
ಸಹಾಯಕ ರೆಫರಿಗಳು: ವೈರಮುತ್ತು ಪರಶುರಾಮನ್, ಸುಮಂತ ದತ್ತಾ, ಅರುಣ್ ಶಶಿಧರನ್ ಪಿಳ್ಳೈ, ಉಜ್ಜಲ್ ಹಲ್ಡರ್, ಮುರಳೀಧರನ್ ಪಾಂಡುರಂಗನ್, ದೀಪೇಶ್ ಮನೋಹರ್ ಸಾವಂತ್, ಸೌರವ್ ಸರ್ಕಾರ್, ಕ್ರಿಸ್ಟೋಫರ್ ಪೀಟರ್, ರಿಯೋಹ್ಲಾಂಗ್ ಧಾರ್ ಮತ್ತು ಎಲಂಗ್ಬಾಮ್ ದೇಬಾಲಾ ದೇವಿ.
2026ರ ವಿಶ್ವ ಕ್ರೀಡಾ ಕ್ಯಾಲೆಂಡರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಮುಖವಾಗಿ ಸ್ಥಾನ ಪಡೆದಿದೆ. 48 ತಂಡಗಳೊಂದಿಗೆ ನಡೆಯುವ ಈ ವಿಶ್ವಕಪ್‌ ಜೂನ್ 11ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!