ಉದಯವಾಹಿನಿ, ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರದಲ್ಲಿ ಘರ್ಷಣೆ ಆಗಿದೆ, ಇದು ಆಗಬಾರದಿತ್ತು. ನಾನು ಈಗಾಗಲೇ ಬಳ್ಳಾರಿ ಡಿಸಿ, ಎಸ್ಪಿ ಜೊತೆಗೆ ಮಾತನಾಡಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಈಗ ಕಂಟ್ರೋಲ್‌ಗೆ ಬಂದೆದೆ. ಮುಖ್ಯಮಂತ್ರಿಗಳಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನೂ ಬಿಡೋದಿಲ್ಲ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಫೈರಿಂಗ್ ಹೇಗೆ ಆಯ್ತು? ಅಂತಾ ಪೊಲೀಸರು ತನಿಖೆ ಮಾಡ್ತಾ ಇದಾರೆ. ಸಿಎಂ ಸಹ ಈ ಘಟನೆಗೆ ಬೇಸರ ವ್ಯಕ್ತಪಡಿಸಿ ಸಿಟ್ಟು ಮಾಡಿಕೊಂಡಿದ್ದಾರೆ. ಯಾರೇ ಇದ್ರೂ ಕ್ರಮ ಕೈಗೊಳ್ತೀವಿ. ನಾಗೇಂದ್ರ ಬಳ್ಳಾರಿಗೆ ಹೋಗ್ತಾ ಇದ್ದಾರೆ. ನಾನು ಸಹ ಇಂದು ಸಂಪುಟ ಸಭೆ ಬಳಿಕ, ಸಿಎಂ ಜೊತೆ ಕೋಗಿಲು ಲೇಔಟ್ ಸಭೆ ಮುಗಿಸಿ ಬಳ್ಳಾರಿಗೆ ಹೋಗ್ತೀನಿ ಅಂತಾ ಸ್ಪಷ್ಟಪಡಿಸಿದ್ದಾರೆ.
