ಉದಯವಾಹಿನಿ, ಚಿಕ್ಕಬಳ್ಳಾಪುರ: ಗ್ರಾಹಕರೊಬ್ಬರು ಬೇಕರಿಯೊಂದರಲ್ಲಿ ಖರೀದಿಸಿದ್ದ ಫ್ರೂಟ್ ಜಾಮ್ ಬಾಟಲ್‌ನಲ್ಲಿ ಹುಳಗಳು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ನಡೆದಿದೆ. ನಂದಿ ಗ್ರಾಮದ ಶಾಂತಕುಮಾರ್ ಎಂಬವರು ಗ್ರಾಮದ ಬೇಕರಿಯೊಂದರಲ್ಲಿ ಬಾಟಲಿ ಜಾಮ್ ಅನ್ನು ಖರೀದಿಸಿದ್ದಾರೆ. ಮನೆಗೆ ಹೋಗಿ ಜಾಮ್ ಬಾಟಲಿಯ ಮುಚ್ಚಳ ತೆರೆದು ಇನ್ನೇನು ತಿನ್ನೋಕೆ ಮುಂದಾಗಿದ್ದಾರೆ, ಅಷ್ಟರಲ್ಲಿ ಬಾಟಲಿಯೊಳಗೆ ಹುಳುಗಳು ಹೌಹಾರಿದ್ದಾರೆ.
ಬಾಟಲಿಯ ಮೇಲೆ ಜಾಮ್ ತಯಾರಿಸಿದ ದಿನಾಂಕ ಸೆಪ್ಟೆಂಬರ್ 2025 ಹಾಗೂ ಅವಧಿ ಮೀರುವ ದಿನಾಂಕ ಅಕ್ಟೋಬರ್ 2026 ಎಂದು ನಮೂದಿಸಲಾಗಿದೆ. ಜಾಮ್ ತಯಾರಾಗಿ ನಾಲ್ಕು ತಿಂಗಳಾಗಿದೆ. ಆದರೆ ಈಗಾಗಲೇ ಜಾಮ್ ನಲ್ಲಿ ಹುಳ ಬಂದಿದೆ. ಇದನ್ನ ಕಂಡ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ.
ಈ ಬಗ್ಗೆ ಬೇಕರಿ ಮಾಲೀಕನನ್ನ ಪ್ರಶ್ನೆ ಮಾಡಿದ್ರೆ ನಮಗೇನು ಗೊತ್ತಾಗುತ್ತೆ..? ಡಿಸ್ಟ್ರಿಬ್ಯೂಟರ್‌ರನ್ನ ಕೇಳಬೇಕು ಅಂತಾನೆ, ಡಿಸ್ಟ್ರಿಬ್ಯೂಟರ್ ನನ್ನ ಕೇಳಿದ್ರೆ ಕಂಪನಿಯವರನ್ನ ಕೇಳಿ ಅಂತಾರಂತೆ. ಹೀಗಾಗಿ ಈ ಬಗ್ಗೆ ಗ್ರಾಹಕರು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.
