ಉದಯವಾಹಿನಿ, ದಾವಣಗೆರೆ: ನಗರದಲ್ಲಿ ಕಳೆದ ಅ.11 ರಂದು ಮನೆಗಳು ತೆರವುಗೊಂಡು ನಿರಾಶ್ರಿತರಾಗಿದ್ದ 36 ಕುಟುಂಬಗಳಿಗೆ `ಸೂರಿನ ಭಾಗ್ಯ ಒದಗಿ ಬಂದಿದೆ.
ನಗರದ ಲೋಕಿಕೆರೆ ರಸ್ತೆಯ ರವೀಂದ್ರನಾಥ್ ಬಡಾವಣೆಯ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದ 36 ಕುಟುಂಬಗಳ ಮನೆಗಳನ್ನು ತೆರವು ಮಾಡಲಾಗಿತ್ತು. ನಿರಾಶ್ರಿತರನ್ನು ತುರ್ಚಘಟ್ಟ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಮೂರು ತಿಂಗಳಾದರೂ ಸೂರಿನ ವ್ಯವಸ್ಥೆ ಕಲ್ಪಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಬೆಂಗಳೂರಿನ ಕೋಗಿಲು ನಿರಾಶ್ರಿತರಿಗೆ ಮಿಡಿದ ಹೃದಯಗಳು ದಾವಣಗೆರೆಯ 36 ಬಡ ಕುಟುಂಬಗಳ ಕಷ್ಟಕ್ಕೆ ಮಿಡಿಯಲಿಲ್ಲ ಇಂದು ಎಸ್‍ಓಜಿ ಕಾಲೋನಿಯಲ್ಲಿ 36 ಕುಟುಂಬಗಳಿಗೆ ನಿವೇಶನ ನೀಡಲು ಪಾಲಿಕೆ ಮುಂದಾಗಿದೆ. ಇಂದು ಜ.2 ಬೆಳಗ್ಗೆಯಿಂದಲೇ ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿವೇಶನ ಅಳತೆ ಮಾಡುತ್ತಿದ್ದಾರೆ. ನಿವೇಶನ ನೀಡಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ವರದಿ ಮಾಡಿದ್ದ `ಪಬ್ಲಿಕ್ ಟಿವಿ’ಗೆ ಜನ ಧನ್ಯವಾದ ತಿಳಿಸಿದ್ದಾರೆ.
