ಉದಯವಾಹಿನಿ, ನವದೆಹಲಿ: 2025 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾದ ಕಾರುಗಳ ಪೈಕಿ ಅರ್ಧದಷ್ಟು ಕಾರುಗಳು ಭಾರತದಲ್ಲಿ ಉತ್ಪಾದನೆಯಾಗಿದೆ ಎಂದು ವರದಿ ತಿಳಿಸಿದೆ.ಲೈಟ್‌ಸ್ಟೋನ್‌ನ ವರದಿಯ ಪ್ರಕಾರ, ಮಹೀಂದ್ರಾ ಮತ್ತು ಟಾಟಾ ಕಂಪನಿಗಳ ಕಾರುಗಳು ಹೆಚ್ಚು ಮಾರಾಟವಾಗಿದೆ. 2024 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾದ ಎಲ್ಲಾ ಜಪಾನೀಸ್-ಬ್ರಾಂಡೆಡ್ ಲಘು ವಾಹನಗಳಲ್ಲಿ 84% ಭಾರತದಿಂದ ಆಮದಾಗಿತ್ತು. 10% ಜಪಾನ್‌ನಲ್ಲಿ ನಿರ್ಮಾಣವಾದ ಕಾರು ಮಾರಾಟವಾಗಿದೆ.
ವಿಶ್ವದಲ್ಲಿ ಸಾಧಾರಣವಾಗಿ ಚೀನಿ ಕಂಪನಿಗಳ ಕಾರು ಹೆಚ್ಚು ಮಾರಾಟವಾಗುತ್ತವೆ. ಆದರೆ ಆಫ್ರಿಕಾದಲ್ಲಿ ಆಮದು ಮಾಡಿಕೊಂಡ ಭಾರತ ಕಾರುಗಳು ಜನಪ್ರಿಯವಾಗಿದೆ.
2025ರ ಮೊದಲ ಐದು ತಿಂಗಳಲ್ಲಿ ಎಲ್ಲಾ ಪ್ರಯಾಣಿಕ ವಾಹನ ಮಾರಾಟದಲ್ಲಿ 49% ಭಾರತದಿಂದ ಆಮದು ಮಾಡಿದ ವಾಹನಗಳು ಮಾರಾಟವಾಗಿವೆ.
ಬೇರೆ ದೇಶಗಳಿಂದ ಆಮದಾಗಿರವ ಕಾರುಗಳ ಬೆಲೆ ಜಾಸ್ತಿ ಇದ್ದರೆ ಭಾರತದ ಕಾರುಗಳ ಬೆಲೆ ಕಡಿಮೆಯಿದೆ. 2009 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾದ ಸುಮಾರು ಅರ್ಧದಷ್ಟು ಲಘು ವಾಹನಗಳು ಸ್ಥಳೀಯವಾಗಿ ಉತ್ಪಾದಿಸಲ್ಪಟ್ಟವು. ಆ ಸಮಯದಲ್ಲಿ ಕೇವಲ 5% ಮಾತ್ರ ಭಾರತದ ಕಾರುಗಳು ಮಾರಾಟವಾಗುತ್ತಿದ್ದವು.
