ಉದಯವಾಹಿನಿ, ಲಕ್ನೋ: ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಕೈಗಾರಿಕಾ ಪ್ರದೇಶದಲ್ಲಿ 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಬಳಿಕ ಆಕೆಯನ್ನ ಹತ್ಯೆ ಮಾಡಲಾಗಿದ್ದು, ಗುರುತು ಮರೆಮಾಚಲು ಕಿರಾತಕರು ದೇಹವನ್ನ ಮನೆಯ ಛಾವಣಿಯಿಂದ ಕೆಳಗೆ ಎಸೆದಿದ್ದಾರೆ.
ಘಟನೆಗೆ ಸಂಬಂಧಿಸಿದ ಆರೋಪಿಗಳನ್ನ ಪೊಲೀಸರು ಎನ್‌ಕೌಂಟರ್ ಬಳಿಕ ಬಂಧಿಸಿದ್ದಾರೆ. ಘಟನೆಯು ನಡೆದಿದೆ. ಫಿರೋಜಾಬಾದ್ ಜಿಲ್ಲೆಯ ಕಾರ್ಮಿಕನ ಮಗಳಾದ ಈ ಬಾಲಕಿ ಮನೆಯ ಮೇಲ್ಛಾವಣಿಯಲ್ಲಿ ಆಟವಾಡುತ್ತಿದ್ದಳು. ನೆರೆ ಮನೆಯಲ್ಲಿ ಬಾಡಿಗೆಗೆ ಇದ್ದ ಇಬ್ಬರು ಯುವಕರು – ರಾಜೂ (ಬಲರಾಂಪುರ ಜಿಲ್ಲೆಯ ಭಗವಾನ್‌ಪುರ ಮೂಲದವನು) ಮತ್ತು ವೀರು ಕಶ್ಯಪ್ (ಲಖೀಂಪುರ ಖೀರಿ ಜಿಲ್ಲೆಯ ಗೋಲಾ ಗೋರಖನಾಥ ಮೂಲದವನು) – ಮದ್ಯ ಅಮಲಲ್ಲಿ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ತೀವ್ರವಾಗಿ ಒದ್ದಾಡಿ ಕೂಗಾಡಿದ್ದರಿಂದ ಆಕೆಯನ್ನ ಕೊಂದು ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ 3ನೇ ಮಹಡಿಯ ಛಾವಣಿಯಿಂದ ಕೆಳಗೆ ಎಸೆದಿದ್ದಾರೆ. ಮೊದಲು ಬಾಲಕಿ ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ಹರಡಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಸತ್ಯ ಬಯಲಾಗಿದೆ.
